ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಬ್ರಿಟನ್ ಕನ್ಸರ್ವೇಟಿವ್ ಪಕ್ಷದ ನಾಯಕ ಮತ್ತು ಪ್ರಧಾನಿಯಾಗಿ ಬೋರಿಸ್ ಜಾನ್ಸನ್ ಅವ್ರ ಉತ್ತರಾಧಿಕಾರಿಯ ಆಯ್ಕೆಗಾಗಿ ನಡೆಯುತ್ತಿರುವ ಎರಡನೇ ಸುತ್ತಿನ ಮತದಾನದಲ್ಲಿ ಬ್ರಿಟಿಷ್ ಮಾಜಿ ಹಣಕಾಸು ಸಚಿವ ರಿಷಿ ಸುನಕ್ ಅಗ್ರಸ್ಥಾನದಲ್ಲಿದ್ದಾರೆ. ಈ ಮೂಲಕ ಭಾರತೀಯ ಮೂಲದ ಸುನಕ್‌ ಬ್ರಿಟಿಷ್‌ ಪ್ರಧಾನಿ ಗದ್ದುಗೆ ಏರುವುದು ಬಹುತೇಕ ಖಚಿತವಾಗಿದೆ.

ಅಂದ್ಹಾಗೆ, ಒಬ್ಬ ಅಭ್ಯರ್ಥಿಯನ್ನ ತೆಗೆದುಹಾಕಲಾಗಿದ್ದು ಎಂದು ರಾಯಿಟರ್ಸ್ ವರದಿ ಮಾಡಿದೆ.

ಬ್ರಿಟನ್ನ ಮುಂದಿನ ಪ್ರಧಾನಿಯನ್ನ ನಿರ್ಧರಿಸಲು ಕನ್ಸರ್ವೇಟಿವ್ ಸಂಸದರು ಗುರುವಾರ ನಡೆಸಿದ ಇತ್ತೀಚಿನ ಸುತ್ತಿನ ಮತದಾನದಲ್ಲಿ ಮಾಜಿ ಹಣಕಾಸು ಸಚಿವ ರಿಶಿ ಸುನಕ್ ಅಗ್ರಸ್ಥಾನದಲ್ಲಿದ್ರೆ, ಬುಕ್ ಮೇಕರ್ ನೆಚ್ಚಿನ ಪೆನ್ನಿ ಮೊರ್ಡಾಂಟ್ ನಂತರದ ಸ್ಥಾನ ಪಡೆದಿದ್ದಾರೆ.

ಸುನಕ್ 101 ಟೋರಿ ಸಂಸದರ ಬೆಂಬಲವನ್ನ ಗೆದ್ದರು. ಇನ್ನು ನಂತ್ರ ಮೊರ್ಡಾಂಟ್ 83, ಲಿಜ್ ಟ್ರಸ್ 64, ಕೆಮಿ ಬಡೆನೋಚ್ 49, ಟಾಮ್ ಟುಗೆಂಧಟ್ 32 ಮತ್ತು ಸುಯೆಲ್ಲಾ ಬ್ರೇವರ್ಮನ್ 27 ಮತಗಳನ್ನ ಪಡೆದು ಕೊನೆಯ ಸ್ಥಾನಕ್ಕೆ ಕುಸಿದಿದ್ದಾರೆ.

Share.
Exit mobile version