ನವದೆಹಲಿ : ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ಏಪ್ರಿಲ್ 1 ರಂದು ದೇಶಾದ್ಯಂತ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ 6,035 ಕ್ಲರ್ಕ್ ಹುದ್ದೆಗಳ ನೇಮಕಾತಿಗಾಗಿ ನಡೆಸಲಾದ ಮುಖ್ಯ ಪರೀಕ್ಷೆಯ ಫಲಿತಾಂಶಗಳನ್ನ ಬಿಡುಗಡೆ ಮಾಡಿದೆ. ಈ ಫಲಿತಾಂಶಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
ಅಂತೆಯೇ, ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು IBPS ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ವಿವರಗಳನ್ನ ನಮೂದಿಸುವ ಮೂಲಕ ಫಲಿತಾಂಶ ಪರಿಶೀಲಿಸಬಹುದು. ಇನ್ನು ಈ ಫಲಿತಾಂಶದ ಲಿಂಕ್ ಏಪ್ರಿಲ್ 30 ರವರೆಗೆ ಲಭ್ಯವಿರುತ್ತದೆ. ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳು ಪ್ರಮಾಣಪತ್ರ ಪರಿಶೀಲನೆ ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು. ಅಂದ್ಹಾಗೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಐಬಿಪಿಎಸ್ ದೇಶಾದ್ಯಂತ ಕ್ಲರ್ಕ್‌ಗಳ ನೇಮಕಾತಿಗಾಗಿ ಮುಖ್ಯ ಪರೀಕ್ಷೆಗಳನ್ನ ನಡೆಸಿತ್ತು.
IBPS ಕ್ಲರ್ಕ್ ಮುಖ್ಯ ಫಲಿತಾಂಶ ನೋಡುವುದು ಹೇಗೆ.?
* IBPS ಅಧಿಕೃತ ವೆಬ್‌ಸೈಟ್ ibps.in ಗೆ ಹೋಗಿ.
* ಅಲ್ಲಿನ ಮುಖಪುಟದಲ್ಲಿ ‘CRP-Clerks-XII’ ಫಲಿತಾಂಶ ಲಿಂಕ್ ಕ್ಲಿಕ್ ಮಾಡಿ. ನಿಮ್ಮ ಪರದೆಯ ಮೇಲೆ ಹೊಸ ಪುಟ ಕಾಣಿಸುತ್ತದೆ.
* ಅಲ್ಲಿ ಅಭ್ಯರ್ಥಿಗಳು ತಮ್ಮ ನೋಂದಣಿ ಸಂಖ್ಯೆ / ರೋಲ್ ಸಂಖ್ಯೆ, ಪಾಸ್‌ವರ್ಡ್ / ಜನ್ಮ ದಿನಾಂಕದ ವಿವರಗಳನ್ನು ಲಾಗಿನ್ ಪುಟದಲ್ಲಿ ನಮೂದಿಸಬೇಕು.
* IBPS ಕ್ಲರ್ಕ್ ಮುಖ್ಯ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ, ಅದನ್ನ ಡೌನ್‌ಲೋಡ್ ಮಾಡಿ.
* ಭವಿಷ್ಯದ ಬಳಕೆಗಾಗಿ ಫಲಿತಾಂಶದ ಹಳೆಯನ್ನ ಮುದ್ರಣ ತೆಗೆದುಕೊಳ್ಳಿ.
BREAKING NEWS : ‘ಕುಟುಂಬ ವ್ಯವಸ್ಥೆಯ ಮೇಲೆ ಹಲ್ಲೆ’ : ಸಲಿಂಗ ವಿವಾಹ ವಿರೋಧಿಸಿ ‘ಸುಪ್ರೀಂ’ ಮೆಟ್ಟಿಲೇರಿದ ‘ಜಮೀಯತ್’
BIGG NEWS : ದೇಶದ ‘ನಿರುದ್ಯೋಗ’ ದರ ಮಾರ್ಚ್ ನಲ್ಲಿ 3 ತಿಂಗಳ ಗರಿಷ್ಠ 7.8ರಷ್ಟು ಏರಿಕೆ ; CMIE ಮಾಹಿತಿ
BIGG NEWS : “ಹೊಸ ಬೆದರಿಕೆಗಳನ್ನ ಎದುರಿಸಲು ಸಿದ್ಧರಾಗಿರಿ” ; ಕಮಾಂಡರ್’ಗಳ ಸಮ್ಮೇಳನದಲ್ಲಿ ಪ್ರಧಾನಿ ಮೋದಿ