ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವಜೀರಾಬಾಸ್‍ನಲ್ಲಿ ನಡೆದ ರ್ಯಾಲಿಯಲ್ಲಿ ದಾಳಿ ನಡೆದ ಒಂದು ದಿನದ ನಂತರ, ಪಾಕಿಸ್ತಾನದ ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್,  ದಾಳಿಯ ಬಗ್ಗೆ ನನಗೆ ಒಂದು ದಿನ ಮುಂಚಿತವಾಗಿಯೇ ಗೊತ್ತಿತ್ತು ಎಂದು ಹೇಳಿದ್ದಾರೆ.

ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪಾಕ್ ಮಾಜಿ ಪ್ರಧಾನಿ, “ನನ್ನ ಮೇಲೆ ದಾಳಿ ನಡೆಯುತ್ತದೆ ಎಂದು ಒಂದು ದಿನ ಮುಂಚಿತವಾಗಿ ನನಗೆ ತಿಳಿದಿತ್ತು. ಗುಜರಾತ್‍ನ ವಜೀರಾಬಾದ್‍ನಲ್ಲಿ ಅವರು ನನ್ನನ್ನು ಕೊಲ್ಲಲು ಯೋಜಿಸಿದ್ದಾರೆ ಎಂದು ದಾಳಿಯ ಹಿಂದಿನ ದಿನ ತಿಳಿಯಿತು” ಎಂದರು.

ಖಾನ್ ತಮ್ಮ ಭಾಷಣದಲ್ಲಿ ಪಿಎಂಎಲ್-ಎನ್ ಮತ್ತು ಪಿಪಿಪಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಎರಡೂ ಪಕ್ಷಗಳು ಭಾರಿ ಭ್ರಷ್ಟಾಚಾರವನ್ನ ಮಾಡಿವೆ ಮತ್ತು ದೇಶದ ಸಾಲಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿವೆ ಎಂದು ಹೇಳಿದರು.

“ಜನರು ನನಗೆ ಮತ ಹಾಕಿದರು. ಯಾಕಂದ್ರೆ, ಅವರು ಅವರಿಂದ ಬೇಸತ್ತಿದ್ದರು (ಆದರೆ) ಸಂಸ್ಥೆಯು ಈಗ ಬದಲಾಗುವ ಸಮಯ ಬಂದಿದೆ ಮತ್ತು ಅವರನ್ನ ಮರಳಿ ಕರೆತರುವ ಸಮಯ ಬಂದಿದೆ ಎಂದು ನಿರ್ಧರಿಸುತ್ತದೆ” ಎಂದು ಖಾನ್ ಹೇಳಿದರು, “ಈ ಬಾರಿ, ಕಳೆದ 40 ವರ್ಷಗಳಿಂದ ಕದಿಯುವವರೊಂದಿಗೆ ಜನರು ಹೋಗಲಿಲ್ಲ ಎಂದು ಅವರು ಆಘಾತಕ್ಕೊಳಗಾದರು” ಎಂದು ಖಾನ್ ಹೇಳಿದರು.

 

ಹೊಸ ಚಾಟ್ಬಾಟ್ ‘ಆಧಾರ್ ಮಿತ್ರ’ ಪ್ರಾರಂಭಿಸಿದ ‘UIDAI’ ; ‘ಆಧಾರ್ ನೋಂದಣಿ’ ಈಗ ಇನ್ನಷ್ಟು Easy

BIGG NEWS : ‘ಹೊನ್ನಾಳಿ ಚಂದ್ರಶೇಖರ್’ ಸಾವು ಪ್ರಕರಣ : ತಂದೆ ರಮೇಶ್ ದೂರಿನ ಮೇರೆಗೆ ‘FIR’ ದಾಖಲು

BIGG NEWS ; ‘ಪ್ಲಾಟ್‍ ಫಾರ್ಮ್ ಟಿಕೆಟ್’ ದರ ನಿರ್ಧರಿಸುವ ‘DRM’ಗಳ ಅಧಿಕಾರ ಹಿಂತೆಗೆದುಕೊಂಡ ರೈಲ್ವೆ ಸಚಿವಾಲಯ

Share.
Exit mobile version