ನವದೆಹಲಿ : NEET PG 2023 ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಭ ಸುದ್ದಿ ನೀಡಿದೆ. NEET PG 2023 (NEET PG-2023) ಗೆ ಅರ್ಜಿ ಸಲ್ಲಿಸಲು, MBBS ವಿದ್ಯಾರ್ಥಿಗಳು ತಮ್ಮ ಇಂಟರ್ನ್ಶಿಪ್ ಪೂರ್ಣಗೊಳಿಸುವ ದಿನಾಂಕವನ್ನ ಮತ್ತೊಮ್ಮೆ ವಿಸ್ತರಿಸಿದ್ದಾರೆ.
NEET PG-2023 ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮೊದಲು, MBBS ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಒಂದು ವರ್ಷದ ಇಂಟರ್ನ್ಶಿಪ್’ನ್ನ ಪೂರ್ಣಗೊಳಿಸಬೇಕು. ಈ ಇಂಟರ್ನ್ಶಿಪ್ ಪೂರ್ಣಗೊಳಿಸುವ ದಿನಾಂಕವನ್ನ ಈಗಾಗಲೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಒಮ್ಮೆ ವಿಸ್ತರಿಸಿದೆ. ಇಂಟರ್ನ್ಶಿಪ್ ಪೂರ್ಣಗೊಳಿಸುವ ದಿನಾಂಕವನ್ನ ಮಾರ್ಚ್ 31 ರಿಂದ ಜೂನ್ 30 ರವರೆಗೆ ವಿಸ್ತರಿಸಲಾಗಿದೆ. ಈಗ ಆಗಸ್ಟ್ 11ರವರೆಗೆ ವಿಸ್ತರಿಸಿದೆ.
ಇತ್ತೀಚೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆ ದಿನಾಂಕವನ್ನ ಮತ್ತೊಮ್ಮೆ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ. ಈಗ, NEET PG 2023ಗೆ ಅರ್ಜಿ ಸಲ್ಲಿಸಲು MBBS ವಿದ್ಯಾರ್ಥಿಗಳು ಆಗಸ್ಟ್ 11 ರೊಳಗೆ ಇಂಟರ್ನ್ಶಿಪ್ ಪೂರ್ಣಗೊಳಿಸಬೇಕು. ಇಂಟರ್ನ್ಶಿಪ್ನ ಅಂತಿಮ ದಿನಾಂಕವನ್ನ ಆಗಸ್ಟ್ 11 ರವರೆಗೆ ವಿಸ್ತರಿಸಲಾಗಿದೆ ಎಂದು ನ್ಯಾಷನಲ್ ಬೋರ್ಡ್ ಆಫ್ ಎಕ್ಸಾಮಿನೇಷನ್ಸ್ (NBEMS) ಮಂಗಳವಾರ ಪ್ರಕಟಣೆಯಲ್ಲಿ ಪ್ರಕಟಿಸಿದೆ. ಜುಲೈ 1 ಮತ್ತು ಆಗಸ್ಟ್ 11 ರ ನಡುವೆ ಇಂಟರ್ನ್ಶಿಪ್ ಪೂರ್ಣಗೊಳಿಸಿದ MBBS ವಿದ್ಯಾರ್ಥಿಗಳು NEET PG-2023 (NEET PG-2023) ಗೆ ಅರ್ಜಿ ಸಲ್ಲಿಸಲು ಅರ್ಹರು ಎಂದು ರಾಷ್ಟ್ರೀಯ ಪರೀಕ್ಷಾ ಮಂಡಳಿ NBEMS ಸ್ಪಷ್ಟಪಡಿಸಿದೆ. ಅದ್ರಂತೆ, ಅಭ್ಯರ್ಥಿಗಳು NEET PG-2023 ಗೆ ಫೆಬ್ರವರಿ 9, ಮಧ್ಯಾಹ್ನ 3 ರಿಂದ ಫೆಬ್ರವರಿ 12 ರವರೆಗೆ ಅರ್ಜಿ ಸಲ್ಲಿಸಬಹುದು. ‘ಮೊದಲು ಬಂದವರಿಗೆ, ಮೊದಲು ಸರ್ವ್’ ಆಧಾರದ ಮೇಲೆ ಪರೀಕ್ಷಾ ಕೇಂದ್ರಗಳ ಹಂಚಿಕೆಯಾಗಲಿದೆ ಎಂದು ತಿಳಿದುಬಂದಿದೆ.
Considering the future of more than 13,000 MBBS students across 5 States/UTs who were not eligible for #NEET PG 2023 exam due to delayed internship, MoHFW has decided to extend last date of completion of internship for eligibility to 11th Aug 2023.
— Ministry of Health (@MoHFW_INDIA) February 7, 2023
Skin Care : ಮುಖದ ಕಾಂತಿ ಹೆಚ್ಚಿಸಲೆಂದು ‘ಕ್ರೀಮ್’ಗಳನ್ನು ಬಳಕೆ ಮಾಡ್ತಾದ್ದೀರಾ ? ಈ ಅಪಾಯ ತಪ್ಪಿದ್ದಲ್ಲ
BREAKING NEWS : ಮಹಿಳೆಗೆ ಹೃದಯಾಘಾತ ; ಜೋಧ್ಪುರದಲ್ಲಿ ‘ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ’, ನಂತ್ರ ಮಹಿಳೆ ಸಾವು