ಇಸ್ಲಾಮಾಬಾದ್: ಇತರ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರಿಂದ ಪಡೆದ ಸರ್ಕಾರಿ ಉಡುಗೊರೆಗಳನ್ನ ಕಾನೂನುಬಾಹಿರವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಚುನಾವಣಾ ಆಯೋಗವು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನ ಸಾರ್ವಜನಿಕ ಹುದ್ದೆಯಿಂದ ಅನರ್ಹಗೊಳಿಸಿದೆ ಎಂದು ವರದಿಯಾಗದೆ. ಈ ಮೂಲಕ ಯಾವುದೇ ಚುನಾವಣೆಗೆ ಸ್ಪರ್ಧಿಸದಂತೆ 5 ವರ್ಷ ನಿಷೇಧ ಹೇರಿದೆ.

ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಚುನಾವಣಾ ಆಯೋಗವು ಇಮ್ರಾನ್ ಖಾನ್ ಅವ್ರನ್ನ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಿದೆ. ಇನ್ನು ತೋಶಾ ಖಾನಾ ಪ್ರಕರಣದಲ್ಲಿ ಇಮ್ರಾನ್ ಖಾನ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಇಸಿಪಿ ತೀರ್ಪು ನೀಡಿದೆ. ಈ ಮೂಲಕ ಇಮ್ರಾನ್ ಖಾನ್ ಇನ್ನು ಮುಂದೆ ಸಂಸತ್ತಿನ ಸದಸ್ಯರಲ್ಲ ಎಂದು ಇಸಿಪಿ ಘೋಷಿಸಿದೆ. ಇಸಿಪಿಯ ನಿರ್ಧಾರದ ಪ್ರಕಾರ, ಭ್ರಷ್ಟಾಚಾರಕ್ಕಾಗಿ ಇಮ್ರಾನ್ ಖಾನ್ ವಿರುದ್ಧ ಕಾನೂನು ಕ್ರಮಗಳನ್ನ ಕೈಗೊಳ್ಳಲಾಗುವುದು.

Share.
Exit mobile version