ನವದೆಹಲಿ : ಮಹಾರಾಷ್ಟ್ರದ ರಾಜಧಾನಿ ಮುಂಬೈನಲ್ಲಿ ಕೋವಿಡ್ ಪ್ರೇರಿತ ನಿರ್ಬಂಧಗಳನ್ನ ಬಿಎಂಸಿ(BMC) ಮಂಗಳವಾರ ಸಡಿಲಗೊಳಿಸಿದೆ.
ಘೋಷಿಸಲಾದ ಸಡಿಲಿಕೆಗಳ ಪ್ರಕಾರ, ರೆಸ್ಟೋರೆಂಟ್ ಗಳು ಮತ್ತು ಚಿತ್ರಮಂದಿರಗಳು 50% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ನೈಟ್ ಕರ್ಫ್ಯೂ(night curfew)ವನ್ನ ಸಹ ತೆಗೆದು ಹಾಕಲಾಗಿದೆ.
“ಸ್ಥಳೀಯ ಪ್ರವಾಸಿ ತಾಣಗಳು ಸಾಮಾನ್ಯ ಸಮಯಕ್ಕೆ ಅನುಗುಣವಾಗಿ ತೆರೆದಿರುತ್ತವೆ. ಸಾಪ್ತಾಹಿಕ ಬಜಾರ್ʼಗಳು ಸಾಮಾನ್ಯ ಸಮಯಕ್ಕೆ ಅನುಗುಣವಾಗಿ ತೆರೆದಿರುತ್ತವೆ” ಎಂದು ಆದೇಶವು ಹೇಳಿದೆ.
ಮುಂಬೈ ಸೇರಿದಂತೆ ಮಹಾರಾಷ್ಟ್ರದ 11 ಜಿಲ್ಲೆಗಳಲ್ಲಿ ಕೋವಿಡ್-19 ನಿರ್ಬಂಧಗಳನ್ನ ಸಡಿಲಿಸಲು ಹೊಸ ಮಾರ್ಗಸೂಚಿಗಳಲ್ಲಿ, ರಾಜ್ಯ ಸರ್ಕಾರವು ವಿವಾಹ ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆಯನ್ನ ಹೆಚ್ಚಿಸಲು ಅನುಮತಿ ನೀಡಿದೆ. ಇನ್ನು ಈಜುಕೊಳಗಳು, ವಾಟರ್ ಪಾರ್ಕ್ʼಗಳು, ಥಿಯೇಟರ್ʼಗಳು ಮತ್ತು ರೆಸ್ಟೋರೆಂಟ್ʼಗಳು ಸಕ್ಷಮ ಪ್ರಾಧಿಕಾರದ ಅನುಮೋದನೆಗೆ ಒಳಪಟ್ಟು ಶೇಕಡಾ 50ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಿದೆ.
BIGG BREAKING: ರಾಂಚಿ ಕಲ್ಲಿದ್ದಲು ಗಣಿಯಲ್ಲಿ ಭೀಕರ ಅಪಘಾತ : 13 ಮಂದಿ ದಾರುಣ ಸಾವು
Health Tips: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುತ್ತೀರಾ ? ಎಚ್ಚರ ಈ ಅಡ್ಡ ಪರಿಣಾಮಗಳು ಉಂಟಾಗಬಹುದು!