ಬರ್ಮಿಂಗ್ಹ್ಯಾಮ್ : ಭಾರತದ ಅನುಭವಿ ಆಟಗಾರ, ಬಾಕ್ಸರ್ ಶಿವ ಥಾಪಾ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಪಾಕಿಸ್ತಾನದ ಸುಲೇಮಾನ್ ಬಲೂಚ್ ಅವ್ರನ್ನ 63 ಗೋಲುಗಳಿಂದ ಸೋಲಿಸುವ ಮೂಲಕ 5 ಕೆಜಿ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಐದು ಬಾರಿ ಏಷ್ಯನ್ ಚಾಂಪಿಯನ್ ಶಿಪ್ ಪದಕ ವಿಜೇತ ಥಾಪಾ ತಾಂತ್ರಿಕವಾಗಿ ಬಲೂಚ್ ಗಿಂತ ಉತ್ತಮವಾಗಿದ್ದು, ಬಲವಾದ ಪಂಚ್ʼಗಳಿಂದ ಪ್ರೀ ಕ್ವಾರ್ಟರ್ ಫೈನಲ್ʼಗೆ ಲಗ್ಗೆ ಇಟ್ಟಿದ್ದಾರೆ.

ಮಾಜಿ ವಿಶ್ವ ಚಾಂಪಿಯನ್ ಶಿಪ್ ಕಂಚಿನ ಪದಕ ವಿಜೇತ ರಿಂಗ್ ಒಳಗೆ ಅದ್ಭುತ ಚುರುಕುತನವನ್ನ ತೋರಿಸಿದ್ರು. ಒಂದು ಹಂತದಲ್ಲಿ, ಪಾಕ್‌ ಆಟಗಾರ ಹೊಡೆಯಲು ಮುಂದೆ ಬಂದಾಗ ಶಿವ ಥಾಪಾ ಹಿಂದೆ ಸರಿಯುವ ಮೂಲಕ ಪಾಕಿಸ್ತಾನದ ಬಾಕ್ಸರ್‌ನನ್ನ ನೆಲಕ್ಕೆ ಬೀಳಿಸಿದರು.

Share.
Exit mobile version