ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಭಾರತದ 21 ವರ್ಷದ ಕುಸ್ತಿಪಟು ಅನ್ಶು ಮಲಿಕ್ ಕಾಮನ್ವೆಲ್ತ್ ಗೇಮ್ಸ್ʼನಲ್ಲಿ ಚಿನ್ನದ ಪದಕದಿಂದ ವಂಚಿತರಾಗಿದ್ದು, ಮಹಿಳೆಯರ 57 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನ ಗೆದ್ದರು. ಇದು ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ 21ನೇ ಪದಕವಾಗಿದೆ. ಫೈನಲ್ʼನಲ್ಲಿ ಅನ್ಶು 6-4ರಲ್ಲಿ ನೈಜೀರಿಯಾದ ಒಡುನಾಯೊ ಅಡೆಕುರೊಯೆ ವಿರುದ್ಧ ಪರಾಭವಗೊಂಡರು.

ಇದಕ್ಕೂ ಮುನ್ನ, ಅನ್ಶು ಕ್ವಾರ್ಟರ್ ಫೈನಲ್ʼನಲ್ಲಿ ಆಸ್ಟ್ರೇಲಿಯಾದ ಐರೀನ್ ಸೈಮಿಯೋನಿಡಿಸ್ ಅವರನ್ನು ಟೆಕ್ನಿಕಲ್ ಸುಪೀರಿಯರಿಟಿಯಿಂದ ಸೋಲಿಸಿದ್ದರು. ನಂತ್ರ ಸೆಮಿಫೈನಲ್ʼನಲ್ಲಿ ಶ್ರೀಲಂಕಾದ ನೆಥ್ಮಿ ಪೊರುತೋಟೇಜ್ ಅವ್ರನ್ನ ಸೋಲಿಸಿದ್ದರು.

2021ರಲ್ಲಿ ಅನ್ಶು ವಿಶ್ವ ಕುಸ್ತಿ ಚಾಂಪಿಯನ್ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 20 ವರ್ಷದ ಅನ್ಶು ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್‌ನಲ್ಲಿ ಮೂರು ಬಾರಿ ಪದಕ ಗೆದ್ದಿದ್ದಾರೆ. 2021 ಮತ್ತು 2022ರ ಆವೃತ್ತಿಗಳಲ್ಲಿ ಕ್ರಮವಾಗಿ ಚಿನ್ನ ಮತ್ತು ಎರಡನೇ ಕಂಚಿನ ಪದಕವನ್ನು ಪಡೆಯುವ ಮೊದಲು ಅವರು 2020ರ ಆವೃತ್ತಿಯಲ್ಲಿ ಕಂಚು ಗೆದ್ದಿದ್ದರು.

Share.
Exit mobile version