ನವದೆಹಲಿ : ಸೆಪ್ಟೆಂಬರ್ 1, 2022 ರಂದು ಎಲ್ಸಿಎ ಎಂಕೆ 2 ಫೈಟರ್ ಜೆಟ್(LCA Mk2 Fighter Jet) ಅಭಿವೃದ್ಧಿಗೆ ಭದ್ರತೆ ಕುರಿತ ಸಂಪುಟ ಸಮಿತಿ (CCS) ಅನುಮೋದನೆ ನೀಡಿದೆ. ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯ ಮುಖ್ಯಸ್ಥ ಗಿರೀಶ್ ದೇವರಧರೆ, ಎಲ್‌ಸಿಎ ಮಾರ್ಕ್ 2ರ ಅಭಿವೃದ್ಧಿ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಹೇಳಿದರು. ಇದು ಅತ್ಯಾಧುನಿಕ 17.5 ಟನ್ ಸಿಂಗಲ್ ಎಂಜಿನ್ ಸೂಪರ್ಸಾನಿಕ್ ವಿಮಾನವಾಗಿದೆ. ವಾಯುಪಡೆಯಲ್ಲಿ ಅದರ ಆಗಮನವು ಹಳೆಯ ಮಿರಾಜ್ 2000, ಜಾಗ್ವಾರ್ ಮತ್ತು ಮಿಗ್ -29 ಯುದ್ಧ ವಿಮಾನಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.

2024ರಲ್ಲಿ ಈ ಫೈಟರ್ ಜೆಟ್‌ನ ಮೊದಲ ಹಾರಾಟವು ಸಾಧ್ಯವಿದೆ ಎಂದು ಗಿರೀಶ್ ಹೇಳಿದರು. ಆದಾಗ್ಯೂ, ಇದು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಮತ್ತು ಸಿದ್ಧಗೊಳ್ಳಲು ಇನ್ನೂ ಐದು ವರ್ಷಗಳನ್ನ ತೆಗೆದುಕೊಳ್ಳುತ್ತದೆ. ಇದರ ಪೂರ್ಣ ಉತ್ಪಾದನೆಯು 2027ರಿಂದ ಪ್ರಾರಂಭವಾಗಲಿದೆ. ಈ ಯೋಜನೆಗೆ ಹಸಿರು ನಿಶಾನೆ ಎಂದರೆ ಎಲ್ಸಿಎ ಎಂಕೆ 1ಎ ಕಾರ್ಯಕ್ರಮಕ್ಕೂ ಉತ್ತೇಜನ ಸಿಗಲಿದೆ. ಇದು ಐದನೇ ತಲೆಮಾರಿನ ಅತ್ಯಾಧುನಿಕ ಮಧ್ಯಮ ಯುದ್ಧ ವಿಮಾನ ಯೋಜನೆಯನ್ನ ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.

Share.
Exit mobile version