ಬೆಳಗಾವಿ : ಮಧ್ಯಪ್ರದೇಶದ ಮೊರೆನಾ ಬಳಿ ಭಾರತೀಯ ವಾಯು ಸೇನೆಯ ವಿಮಾನಗಳು ಸುಖೋಯ್-30 ಮತ್ತು ಮಿರಾಜ್ 2000 ಮಧ್ಯೆ ಡಿಕ್ಕಿ ಹೊಡೆದು ಪತನಗೊಂಡಿವೆ. ಘಟನೆಯಲ್ಲಿ ಬೆಳಗಾವಿ ಮೂಲದ ಯೋಧ ಹುತಾತ್ಮರಾಗಿದ್ದಾರೆ.
ಹುತಾತ್ಮ ಯೋಧ ಮೂಲತಃ ಬೆಳಗಾವಿಯ ಗಣೇಶಪುರದ ಸಂಭಾಜೀ ನಗರದ ನಿವಾಸಿ, ವಿಂಗ್ ಕಮಾಂಡರ್ ಹನುಮಂತರಾವ್ ಆರ್.ಸಾರಥಿ. ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳನ್ನು ಯೋಧ ಹನುಮಂತರಾವ್ ಅಗಲಿದ್ದಾರೆ. ಹನುಮಂತರಾವ್ ನಿವಾಸಕ್ಕೆ ವಾಯುಸೇನೆ ತರಬೇತಿ ಅಧಿಕಾರಿಗಳ ಭೇಟಿ ನೀಡಿದ್ದಾರೆ.
ದೆಹಲಿಯಿಂದ ವಿಶೇಷ ವಿಮಾನದ ಮೂಲಕ ವಿಂಗ್ ಕಮಾಂಡರ್ ಹನುಮಂತರಾವ್ ಪಾರ್ಥೀವ ಶರೀರವನ್ನು ತರಲಾಗಿದ್ದು, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪಾರ್ಥೀವ ಶರೀರದ ಅಂತಿಮ ದರ್ಸನಕ್ಕೆ ಇಡಲಾಗಿದೆ. ಏರ್ ಪೋರ್ಸ್ ತರಬೇತಿ ಶಾಲೆ, ಅಧಿಕಾರಿಗಳು ಹಾಗೂ ಸಿಬ್ಬಂದಿಯಿಂದ ಗೌರವ ಸಲ್ಲಿಕೆ ಮಾಡಲಾಗಿದೆ.
ʻಮಹಿಳೆಯರು 22-30 ವರ್ಷದೊಳಗೆ ತಾಯ್ತನ ಸ್ವೀಕರಿಸಬೇಕುʼ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಸಲಹೆ