ನವದೆಹಲಿ : ಜಾಗತಿಕವಾಗಿ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳನ್ನ ವಜಾಗೊಳಿಸಲಾಗುತ್ತಿದ್ದು, 2023ರ ಮೊದಲ ತಿಂಗಳಲ್ಲಿಯೇ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ. ಇತ್ತೀಚೆಗೆ, ಮೈಕ್ರೋಸಾಫ್ಟ್ನಲ್ಲಿ 10,000 ಉದ್ಯೋಗಿಗಳನ್ನ ವಜಾಗೊಳಿಸಲಾಗಿದೆ. ಅದೇ ಸಮಯದಲ್ಲಿ, ವರದಿಯ ಪ್ರಕಾರ, ಟ್ವಿಟರ್ ತನ್ನ ಉದ್ಯೋಗಿಗಳ ಸಂಖ್ಯೆಯನ್ನ ಕಡಿಮೆ ಮಾಡಿದೆ. ಮುಂಬರುವ ಸಮಯದಲ್ಲಿ, ಅಮೆಜಾನ್, ಮೆಟಾ, ಮೈಕ್ರೋಸಾಫ್ಟ್ ಮತ್ತು ಸೇಲ್ಸ್ಫೋರ್ಸ್ ಸೇರಿದಂತೆ ಇತರ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸಿವೆ.
ಇದೀಗ ಉನ್ನತ ಐಟಿ ವಲಯದ ಕಂಪನಿಗಳಲ್ಲಿ ಒಂದಾದ ವಿಪ್ರೋ 452 ಹೊಸಬರನ್ನು ವಜಾಗೊಳಿಸಿದೆ. ಜನವರಿ 20ರಂದು ಮಾಹಿತಿ ನೀಡಿದ ಕಂಪನಿ, ನೌಕರರ ಕಳಪೆ ಕಾರ್ಯಕ್ಷಮತೆಯಿಂದಾಗಿ ಅವರನ್ನ ವಜಾ ಮಾಡಲಾಗಿದೆ ಎಂದು ಹೇಳಿದೆ. ಈ ಉದ್ಯೋಗಿಗಳು ತರಬೇತಿಯ ಸಮಯದಲ್ಲಿ ಪದೇ ಪದೇ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಿದ್ದಾರೆ ಎಂದು ಕಂಪನಿ ಹೇಳಿದೆ. ಹೊಸ ಉದ್ಯೋಗಿಗಳಿಂದ ನಾವು ಉತ್ತಮ ಕೆಲಸವನ್ನ ನಿರೀಕ್ಷಿಸುತ್ತೇವೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ.
ತರಬೇತಿ ಹಣ ಮನ್ನಾ.!
ಕಂಪನಿಯು ತನ್ನ ಹೇಳಿಕೆಯಲ್ಲಿ, ವಜಾಗೊಂಡ ಉದ್ಯೋಗಿಗಳಿಗೆ ಕಂಪನಿಯು ವಜಾಗೊಳಿಸುವ ಪತ್ರಗಳನ್ನ ಸಹ ನೀಡಲಾಗಿದೆ. ಈ ಉದ್ಯೋಗಿಗಳ ತರಬೇತಿಗೆ 75 ಸಾವಿರ ರೂಪಾಯಿ ಖರ್ಚು ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ನಿಯಮಗಳ ಪ್ರಕಾರ, ಈ ಉದ್ಯೋಗಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಈ ಮೊತ್ತವನ್ನ ಪಾವತಿಸಬೇಕಾಗಿತ್ತು, ಆದರೆ ಕಂಪನಿಯು ಅದನ್ನು ಮನ್ನಾ ಮಾಡಿದೆ ಎಂದಿದೆ.
ಸ್ವದೇಶಿ ನಿರ್ಮಿತ “BharOS” ಮೊಬೈಲ್ ಆಪರೇಟಿಂಗ್ ಸಿಸ್ಟಮ್ ರೆಡಿ, ಇಲ್ಲಿದೆ ಇದರ ವಿಶೇಷತೆಗಳು
PF Balance : ‘ಪಿಎಫ್’ ಖಾತೆಯಲ್ಲಿನ ಹಣವನ್ನು ಪರಿಶೀಲಿಸಲು ಇಲ್ಲಿವೆ 4 ಸಿಂಪಲ್ ವಿಧಾನಗಳು