ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ಹೆಚ್ಚಿದೆ. ಅಂತರಾಷ್ಟ್ರೀಯ ಭಯೋತ್ಪಾದನೆಯಲ್ಲಿ ಪಾಕಿಸ್ತಾನ ಪರಿಣಿತವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ಗುಜರಾತ್‌ನಲ್ಲಿ ಹೇಳಿದ್ದರು. ಇದನ್ನು ಬಿಟ್ಟರೆ ಭಯೋತ್ಪಾದನೆಯನ್ನ ಬಹಿರಂಗವಾಗಿ ಬೆಂಬಲಿಸಿದ ರಾಷ್ಟ್ರ ಮತ್ತೊಂದಿಲ್ಲ. ಇದೀಗ ಜೈಶಂಕರ್ ಹೇಳಿಕೆಯಿಂದ ಪಾಕಿಸ್ತಾನ ಬೆಚ್ಚಿ ಬಿದ್ದಿದೆ. ಎಂದಿನಂತೆ ಮತ್ತೆ ಸಿಟ್ಟಿನಿಂದ ಭಾರತದ ಬಗ್ಗೆ ಸುಳ್ಳು ಹೇಳಿಕೆ ನೀಡಿ, ಜಗತ್ತನ್ನೇ ದಾರಿ ತಪ್ಪಿಸುವ ಕೆಲಸ ಮಾಡಿದ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಿದೆ.

ಪ್ರತಿ ಬಾರಿಯೂ ಭಾರತದ ನಾಯಕರು ಭಯೋತ್ಪಾದನೆ ಕುರಿತು ಪಾಕಿಸ್ತಾನದ ವಿರುದ್ಧ ಜಗತ್ತನ್ನ ದಾರಿ ತಪ್ಪಿಸುವ ಕೆಲಸ ಮಾಡುತ್ತಾರೆ ಎಂದು ಹೇಳಲು ಜೈಶಂಕರ್ ಅವ್ರ ಹೇಳಿಕೆ ಸಾಕು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇಂತಹ ಹೇಳಿಕೆಗಳು ಸಂಪೂರ್ಣ ಬೇಜವಾಬ್ದಾರಿಯಾಗಿದ್ದು, ನಾವು ಅದನ್ನ ಖಂಡಿಸುತ್ತೇವೆ. ಭಾರತವು ತನ್ನ ನೆಲದಿಂದ ಭಯೋತ್ಪಾದನೆಯನ್ನ ಬೆಂಬಲಿಸುತ್ತದೆ ಮತ್ತು ಅವರ ವಿರುದ್ಧ ಪಿತೂರಿ ನಡೆಸುತ್ತದೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ.

ಜೈಶಂಕರ್ ಹೇಳಿದ್ದೇನು?

ಸೋಮವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. ಒಂದು ಕಡೆ ಭಾರತವನ್ನು ಐಟಿ ಪರಿಣಿತ ಎಂದು ಜಗತ್ತು ಪರಿಗಣಿಸಿದರೆ, ಮತ್ತೊಂದೆಡೆ ಪಾಕಿಸ್ತಾನ ಅಂತಾರಾಷ್ಟ್ರೀಯ ಭಯೋತ್ಪಾದನೆಯಲ್ಲಿ ಪರಿಣಿತವಾಗಿದೆ ಎಂದು ಅವರು ಹೇಳಿದ್ದರು. ಪಾಕಿಸ್ತಾನದ ರೀತಿಯಲ್ಲಿ ಭಯೋತ್ಪಾದನೆಯನ್ನು ಬೇರೆ ಯಾವ ದೇಶವೂ ಬೆಂಬಲಿಸುವುದಿಲ್ಲ ಎಂದು ಜೈಶಂಕರ್ ಕಟುವಾಗಿ ಹೇಳಿದ್ದರು. ಪ್ರತಿ ಬಾರಿಯೂ ಪಾಕಿಸ್ತಾನ ಭಾರತದ ವಿರುದ್ಧ ಹೇಗೆ ಪಿತೂರಿ ನಡೆಸಿದೆ ಎಂಬುದು ಎಲ್ಲರಿಗೂ ಗೊತ್ತು. 26/11 ದಾಳಿಯ ನಂತರ, ಅಂತಹ ನಡವಳಿಕೆಯು ಸ್ವೀಕಾರಾರ್ಹವಲ್ಲ ಎಂದು ನಾವೇ ಅರ್ಥಮಾಡಿಕೊಳ್ಳಬೇಕು. ಯಾರಾದರೂ ಹೀಗೆ ಮಾಡಿದರೆ ಅದರ ಪರಿಣಾಮವನ್ನು ಎದುರಿಸಲು ಸಿದ್ಧರಾಗಿರಬೇಕು.

ಪ್ರತಿ ಬಾರಿಯೂ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ

ಭಯೋತ್ಪಾದಕ ದಾಳಿಗಳನ್ನ ಯಾವಾಗಲೂ ಪಾಕಿಸ್ತಾನದಿಂದ ಭಾರತದ ವಿರುದ್ಧ ನಡೆಸಲಾಗುತ್ತದೆ ಎಂಬುದು ಇಲ್ಲಿ ತಿಳಿಯಬೇಕಾದ ಸಂಗತಿ. ಅನೇಕ ಸಂದರ್ಭಗಳಲ್ಲಿ, ಪಾಕಿಸ್ತಾನದ ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರದಲ್ಲಿ ಅಮಾಯಕರ ಪ್ರಾಣವನ್ನು ತೆಗೆದುಕೊಂಡಿದ್ದಾರೆ. ಅದು ಉರಿ ದಾಳಿಯಾಗಿರಲಿ ಅಥವಾ ನಂತರ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯಾಗಿರಲಿ. ಭಾರತವೂ ಯಾವಾಗಲೂ ನೆರೆಯ ದೇಶಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಲೇ ಬಂದಿದೆ. ಒಂದು ಕಡೆ ಉರಿ ದಾಳಿಯ ನಂತರ ಸರ್ಜಿಕಲ್ ಸ್ಟ್ರೈಕ್ ನಡೆಸಿದರೆ, ಇನ್ನೊಂದು ಕಡೆ ಪುಲ್ವಾಮಾ ದಾಳಿಯ ನಂತರ ವೈಮಾನಿಕ ದಾಳಿ ನಡೆಸಲಾಯಿತು.

Share.
Exit mobile version