ನವದೆಹಲಿ : ಢಾಕಾದ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವೆ 2ನೇ ಏಕದಿನ ಪಂದ್ಯ ನಡೆಯುತ್ತಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸವಾಲನ್ನ ಜೀವಂತವಾಗಿರಿಸಲು ಭಾರತ ತಂಡವು ಯಾವುದೇ ಬೆಲೆ ತೆತ್ತಾದರೂ ಈ ಪಂದ್ಯವನ್ನ ಗೆಲ್ಲಬೇಕಾಗಿದೆ. ಆದ್ರೆ, ಈ ನಡುವೆ ಭಾರತೀಯ ಅಭಿಮಾನಿಗಳ ಟೆನ್ಷನ್ ಹೆಚ್ಚಿಸುವ ಮಾಹಿತಿ ಹೊರಬೀಳುತ್ತಿದೆ. ಫೀಲ್ಡಿಂಗ್ ವೇಳೆ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಕೈಗೆ ಗಾಯವಾಗಿದ್ದು, ಅವರನ್ನು ಎಕ್ಸ್ ರೇಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಎರಡನೇ ಸ್ಲಿಪ್’ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ರೋಹಿತ್, ಮೊಹಮ್ಮದ್ ಸಿರಾಜ್ ಅವರ ಇನ್ನಿಂಗ್ಸ್ನ ಎರಡನೇ ಓವರ್ನ ನಾಲ್ಕನೇ ಎಸೆತದಲ್ಲಿ ಅನಾಮುಲ್ ಹಕ್ ಅವರ ಕ್ಯಾಚ್ ಕೈಬಿಟ್ಟರು ಮತ್ತು ಈ ಸಮಯದಲ್ಲಿ ಅವರ ಎಡಗೈಗೆ ಚೆಂಡಿನಿಂದಾಗಿ ರಕ್ತಸ್ರಾವವಾಗಲು ಪ್ರಾರಂಭಿಸಿತು.

“ಎರಡನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೆಬ್ಬೆರಳಿನ ಗಾಯಕ್ಕೆ ಒಳಗಾಗಿದ್ದರು. ಬಿಸಿಸಿಐ ವೈದ್ಯಕೀಯ ತಂಡವು ಅವರನ್ನ ಮೌಲ್ಯಮಾಪನ ಮಾಡುತ್ತಿದೆ, ಅವರನ್ನು ಸ್ಕ್ಯಾನ್ಗಾಗಿ ಕರೆದೊಯ್ಯಲಾಗಿದೆ”.
ರೋಹಿತ್ ಗಾಯ ಟೀಂ ಇಂಡಿಯಾಗೆ ದೊಡ್ಡ ಹೊಡೆತ

ಮೊದಲ ಏಕದಿನ ಪಂದ್ಯವನ್ನು ಒಂದು ವಿಕೆಟ್ ಅಂತರದಿಂದ ಗೆದ್ದ ಬಾಂಗ್ಲಾದೇಶ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಒಂದು ವೇಳೆ ರೋಹಿತ್ ಶರ್ಮಾ ಅವರ ಗಾಯ ಗಂಭೀರವಾಗಿದ್ದರೆ, ಅದು ಟೀಮ್ ಇಂಡಿಯಾಗೆ ದೊಡ್ಡ ಹಿನ್ನಡೆಯಾಗಬಹುದು. ಏಕೆಂದರೆ ಏಕದಿನ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಉಳಿದಿದೆ, ಮತ್ತು ಇದರ ನಂತರ ಎರಡು ಪಂದ್ಯಗಳ ಟೆಸ್ಟ್ ಸರಣಿಯೂ ಇದೆ. ರೋಹಿತ್ ಶರ್ಮಾ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ.

 

BIGG NEWS: ಸಿದ್ರಾಮುಲ್ಲಾ ಖಾನ್‌ ಎಂದಿದ್ದಕ್ಕೆ ನನಗೇನು ಬೇಸರವಿಲ್ಲ; ಸಿದ್ದರಾಮಯ್ಯ

BREAKING NEWS : ದೆಹಲಿಯಲ್ಲಿ ‘ಕೇಜ್ರಿವಾಲ್’ ಮ್ಯಾಜಿಕ್ ; 15 ವರ್ಷದ ಬಿಜೆಪಿ ಹಿಡಿತ ಅಂತ್ಯ, ‘ಎಂಸಿಡಿ ಚುನಾವಣೆ’ಯಲ್ಲಿ 132 ಸ್ಥಾನ ಗೆದ್ದು, ಬೀಗಿದ ‘AAP’

‘ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್’ : ಜನಸಂಕಲ್ಪ ಯಾತ್ರೆಯಲ್ಲಿ ಸಿಎಂ ಬೊಮ್ಮಾಯಿ ಗುಡುಗು

Share.
Exit mobile version