ಕೆಎನ್ಎನ್ ಡಿಜಿಟಲ್ ಡೆಸ್ಕ್ : ಸರ್ಬಿಯಾದ ನೊವಾಕ್ ಜೊಕೊವಿಕ್ 2023ರ ಆಸ್ಟ್ರೇಲಿಯನ್ ಓಪನ್’ನ್ನ ದಾಖಲೆಯ 10ನೇ ಬಾರಿಗೆ ಗೆದ್ದಿದ್ದಾರೆ. ಪುರುಷರ ಸಿಂಗಲ್ಸ್ ಪ್ರಶಸ್ತಿ ಪಂದ್ಯದಲ್ಲಿ ಅವರು ಗ್ರೀಸ್’ನ ಸ್ಟೆಫಾನೋಸ್ ಸಿಟ್ಸಿಪಾಸ್ ಅವರನ್ನ 6-3, 7-6, 7-6 ಸೆಟ್ ಗಳಿಂದ ಸೋಲಿಸಿದರು. ಅಂತಿಮ ಪಂದ್ಯದಲ್ಲಿ ಜೊಕೊವಿಕ್ ಉತ್ತಮ ಆರಂಭ ನೀಡಿ ಮೊದಲ ಸೆಟ್’ನ್ನ 6-3 ಅಂತರದಿಂದ ಗೆದ್ದುಕೊಂಡರು. ಎರಡನೇ ಸೆಟ್ನಲ್ಲಿ ಇಬ್ಬರೂ ಆಟಗಾರರು ಅದ್ಭುತವಾಗಿ ಸೆಣಸಾಡಿದರು. ಆದ್ರೆ, ಕೊನೆಯಲ್ಲಿ ಜೊಕೊವಿಕ್ 7-6 ಅಂತರದಿಂದ ಗೆದ್ದರು. ಜೊಕೊವಿಕ್ ಪಂದ್ಯವನ್ನ 7-6 ಅಂತರದಿಂದ ಗೆದ್ದಿದ್ದು, ಈ ಗೆಲುವಿನೊಂದಿಗೆ ಅವರು ಎಟಿಪಿ ಶ್ರೇಯಾಂಕದಲ್ಲಿ ಅಗ್ರಸ್ಥಾನ ತಲುಪಿದರು.
24ರ ಹರೆಯದ ಸಿಟ್ಸಿಪಾಸ್ ಆಸ್ಟ್ರೇಲಿಯನ್ ಓಪನ್ನಲ್ಲಿ ಫೈನಲ್ ತಲುಪಿದ ಎರಡನೇ ಕಿರಿಯ ಪುರುಷ ಆಟಗಾರ ಎನಿಸಿಕೊಂಡಿದ್ದಾರೆ. ಜೊಕೊವಿಕ್ 2011ರಲ್ಲಿ ತಮ್ಮ 23ನೇ ವಯಸ್ಸಿನಲ್ಲಿ ಫೈನಲ್ ತಲುಪಿದ್ದರು. ಆದಾಗ್ಯೂ, ಸಿಟ್ಸಿಪಾಸ್ ಚಾಂಪಿಯನ್ ಆಗಲು ಸಾಧ್ಯವಾಗಲಿಲ್ಲ, ಆದರೆ ಜೊಕೊವಿಕ್ ಕೂಡ ಫೈನಲ್ ಗೆದ್ದರು.