ಲಿಮಾ/ಪೆರು : ವಾಯವ್ಯ ಪೆರುವಿನಲ್ಲಿ 60 ಪ್ರಯಾಣಿಕರನ್ನು ಹೊತ್ತ ಬಸ್ ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾಯವ್ಯ ಪೆರುವಿನ ಪಿಯುರಾ ಪ್ರಾಂತ್ಯದಲ್ಲಿ ಕೊರಿಯಾಂಕಾ ಟೂರ್ಸ್ ಕಂಪನಿಗೆ ಸೇರಿದ ಬಸ್ ಲಿಮಾದಿಂದ ಹೊರಟು ಈಕ್ವೆಡಾರ್ ಗಡಿಯಲ್ಲಿರುವ ತುಂಬೆಸ್ಗೆ ತೆರಳುತ್ತಿದ್ದಾಗ ಆರ್ಗನೋಸ್ ಪಟ್ಟಣದ ಬಳಿ ಬಸ್ ಕಂದಕಕ್ಕೆ ಬಿದ್ದಿದ್ದು, 24 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದರು.
“ಡೆವಿಲ್ಸ್ ಕರ್ವ್” ಎಂದು ಕರೆಯಲ್ಪಡುವ ಕಷ್ಟಕರ ಸ್ಥಳದಲ್ಲಿ ಅಪಘಾತ ಸಂಭವಿಸಿದೆ. ಗಾಯಗೊಂಡ ಪ್ರಯಾಣಿಕರನ್ನು ಲಿಮಾದ ಉತ್ತರಕ್ಕೆ ರೆಸಾರ್ಟ್ಗಳಾದ ಎಲ್ ಆಲ್ಟೋ ಮತ್ತು ಮ್ಯಾನ್ಕೋರಾದಲ್ಲಿನ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ ಎಂದು ಘಟನಾ ಸ್ಥಳದಲ್ಲಿದ್ದ ಪೊಲೀಸರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದರು, ಕೆಲವು ಪ್ರಯಾಣಿಕರು ಹೈಟಿ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.
Good News : ಪಿಎಂ ಕಿಸಾನ್ ಯೋಜನೆ ನೆರವು ಪಡೆಯಲು ಹೊಸ ನೋಂದಣಿ, `ಇ-ಕೆವೈಸಿ’ ಮಾಡಿಸಲು ಮನವಿ