ನವದೆಹಲಿ : ಲಿವ್-ಇನ್ ಪಾರ್ಟ್ನರ್ ಶ್ರದ್ಧಾ ವಾಲ್ಕರ್ ಮೂಳೆಗಳನ್ನ ಪುಡಿ ಮಾಡಲು ಅಫ್ತಾಬ್ ಪೂನಾವಾಲಾ ಮಿಕ್ಸರ್ ಬಳಸಿದ್ದ ಮತ್ತು ಮೂರು ತಿಂಗಳ ನಂತರ ತಲೆಯನ್ನ ವಿಲೇವಾರಿ ಮಾಡಿದ್ದರು ಎಂದು ಪ್ರಕರಣದಲ್ಲಿ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ತಿಳಿಸಲಾಗಿದೆ.
ದೆಹಲಿಯ ಕುಖ್ಯಾತ ಫ್ರಿಡ್ಜ್ ಕೊಲೆ ಪ್ರಕರಣದ 6600 ಪುಟಗಳ ಚಾರ್ಜ್ಶೀಟ್ನಲ್ಲಿ ಪೂನಾವಾಲಾ ಶ್ರದ್ಧಾ ಅವರ ಫೋನ್’ನ್ನ ಮುಂಬೈನಲ್ಲಿ ವಿಲೇವಾರಿ ಮಾಡಿದ್ದ ಎಂದು ಹೇಳಲಾಗಿದೆ.
ಶ್ರದ್ಧಾ ವಾಲ್ಕರ್ ಮತ್ತು ಅಫ್ತಾಬ್ ಪೂನಾವಾಲಾ ದೆಹಲಿಗೆ ತೆರಳಿದ್ದರು ಮತ್ತು ಸ್ವಲ್ಪ ಸಮಯದ ನಂತರ ಮೇ 18 ರಂದು ಖರ್ಚು ಮತ್ತು ದಾಂಪತ್ಯ ದ್ರೋಹದ ಬಗ್ಗೆ ವಾಗ್ವಾದದ ನಂತರ, ಅವನು ಅವಳನ್ನು ಕತ್ತು ಹಿಸುಕಿ ಕೊಂದಿದ್ದನು. ಶವವನ್ನ 35 ತುಂಡುಗಳಾಗಿ ಕತ್ತರಿಸಿ ಫ್ರಿಜ್ನಲ್ಲಿ ಇರಿಸಿ ಮುಂದಿನ ವಾರಗಳಲ್ಲಿ ವಿಲೇವಾರಿ ಮಾಡಿದ್ದೇನೆ ಎಂದು ಹೇಳಿದ್ದ. ಇನ್ನು ಪೊಲೀಸರು ಇದುವರೆಗೂ ದೇಹದ 20ಕ್ಕಿಂತ ಕಡಿಮೆ ತುಣುಕುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳೆದ ವರ್ಷದ ಕೊನೆಯಲ್ಲಿ ನಡೆದ ಪಾಲಿಗ್ರಾಫ್ ಮತ್ತು ಮಂಪರು ಪರೀಕ್ಷೆಯಲ್ಲಿ ಅಫ್ತಾಬ್ ಪೂನಾವಾಲಾ ಕೊಲೆಯನ್ನ ಒಪ್ಪಿಕೊಂಡಿದ್ದಾನೆ. ಆದ್ರೆ, ಇದಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.
BIGG NEWS: ಭೂಕಂಪದಿಂದ ಟರ್ಕಿ, ಸಿರಿಯಾದಲ್ಲಿ ಸುಮಾರು 23 ಮಿಲಿಯನ್ ಜನರು ಸಂಕಷ್ಟದಲ್ಲಿದ್ದಾರೆ : WHO ಮಾಹಿತಿ
Health Tips : ನಿಮ್ಮ ದೇಹದಲ್ಲಿ ಈ ಚಿಹ್ನೆಗಳು ಕಾಣಿಸುತ್ತಿವೆಯಾ? ʼಅಧಿಕ ಕೊಬ್ಬಿನ ಸಮಸ್ಯೆʼಯೇ ಮುಖ್ಯ ಕಾರಣ