ನವದೆಹಲಿ : ಜಂಟಿ ಪ್ರವೇಶ ಮುಖ್ಯ ಪರೀಕ್ಷೆ ಅಥವಾ ಜೆಇಇ ಮೇನ್ಸ್ 2022ರ ಸೆಷನ್ 2 ಪರೀಕ್ಷೆಯು ಜುಲೈ 25 ರಂದು ಪ್ರಾರಂಭವಾಗಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಬುಧವಾರ ಘೋಷಿಸಿದೆ. ಅದ್ರಂತೆ, ಜೆಇಇ ಮುಖ್ಯ ಸೆಷನ್ 2 ಪ್ರವೇಶ ಪತ್ರ ನಾಳೆ ಬಿಡುಗಡೆಯಾಗಲಿದೆ ಎಂದು ಎನ್‌ಟಿಎ ತಿಳಿಸಿದೆ.

ಅದ್ರಂತೆ, ಅಭ್ಯರ್ಥಿಗಳು jeemain.nta.nic.in ಭೇಟಿ ನೀಡಿ, ಪ್ರವೇಶ ಪತ್ರಗಳನ್ನ ಡೌನ್‌ಲೋಡ್‌ ಮಾಡಿಕೊಳ್ಳಬೋದು. ಇನ್ನು ಇತ್ತೀಚಿನ ನವೀಕರಣಗಳಿಗಾಗಿ www.nta.ac.in ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ.

ಜೆಇಇ ಮೇನ್ಸ್ ಪ್ರವೇಶ ಪತ್ರಗಳನ್ನ ಡೌನ್ಲೋಡ್ ಮಾಡುವುದು ಹೇಗೆ?
– ಭೇಟಿ – jeemain.nta.nic.in

– ಮುಖಪುಟದಲ್ಲಿ, ಸೆಷನ್ 2 ಅಡ್ಮಿಟ್ ಕಾರ್ಡ್ ಲಿಂಕ್ ಅನ್ನು ಕ್ಲಿಕ್ ಮಾಡಿ.

– ನಿಮ್ಮ ರೋಲ್ ನಂಬರ್ ಮತ್ತು ಜನ್ಮ ದಿನಾಂಕವನ್ನು ಹಾಕಿ

– ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

Share.
Exit mobile version