ನವದೆಹಲಿ : ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ಭಾರಿ ಹಿನ್ನಡೆಯಾಗಿದ್ದು, ಉಪರಾಷ್ಟ್ರಪತಿ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಭಾಗವಹಿಸುವುದಿಲ್ಲ ಎಂದಿದೆ. ಪಕ್ಷದ ನಾಯಕ ಮತ್ತು ಸಂಸದ ಅಭಿಷೇಕ್ ಬ್ಯಾನರ್ಜಿ ಈ ಕುರಿತು ಮಾಹಿತಿ ನೀಡಿದ್ದು, ಟಿಎಂಸಿ ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯಲಿದೆ ಎಂದು ಖಚಿತ ಪಡೆಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅಭಿಷೇಕ್ ಬ್ಯಾನರ್ಜಿ, “ಟಿಎಂಸಿ ಉಪರಾಷ್ಟ್ರಪತಿ ಚುನಾವಣೆಯಿಂದ ದೂರ ಉಳಿಯಲಿದೆ. ಹಾಗಂತ, ಎನ್ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ಜಗದೀಪ್ ಧಂಕರ್ ಅವರನ್ನ ಬೆಂಬಲಿಸುವ ಪ್ರಶ್ನೆಯೇ ಇಲ್ಲ. ಎರಡೂ ಸದನಗಳ 35 ಸಂಸದರೊಂದಿಗೆ ಪಕ್ಷದೊಂದಿಗೆ ಸೂಕ್ತ ಸಮಾಲೋಚನೆಯಿಲ್ಲದೇ ವಿರೋಧ ಪಕ್ಷದ ಅಭ್ಯರ್ಥಿಯನ್ನು ನಿರ್ಧರಿಸಿದ ರೀತಿ, ನಾವು ಮತದಾನ ಪ್ರಕ್ರಿಯೆಯಿಂದ ದೂರವಿರಲು ಸರ್ವಾನುಮತದಿಂದ ನಿರ್ಧರಿಸಿದ್ದೇವೆ” ಎಂದರು.

ಶರದ್ ಪವಾರ್ ತಮ್ಮ ಉಮೇದುವಾರಿಕೆಯನ್ನ ಘೋಷಿಸಿದ್ದರು
ಕಳೆದ ಭಾನುವಾರ ನಡೆದ 17 ವಿರೋಧ ಪಕ್ಷಗಳ ಸಭೆಯ ನಂತ್ರ ಕಾಂಗ್ರೆಸ್ ನಾಯಕಿ ಮಾರ್ಗರೆಟ್ ಆಳ್ವ ಅವರ ಉಮೇದುವಾರಿಕೆಯನ್ನ ಘೋಷಿಸಿದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಎಎಪಿ ಮತ್ತು ತೃಣಮೂಲ ಕಾಂಗ್ರೆಸ್ ಸಭೆಗೆ ಬರದಿದ್ದರೂ, ಎರಡೂ ಪಕ್ಷಗಳು ಆಳ್ವಾ ಅವರನ್ನ ಬೆಂಬಲಿಸುತ್ತವೆ ಎಂದು ಹೇಳಿದ್ದರು. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜೆಎಂಎಂ ವಿರೋಧ ಪಕ್ಷದೊಂದಿಗೆ ಇರಲಿದೆ ಎಂದು ಶರದ್ ಪವಾರ್ ಹೇಳಿದ್ದರು.

Share.
Exit mobile version