ಜಮ್ಮು- ಕಾಶ್ಮೀರ : ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಭದ್ರತಾ ಪಡೆಗಳ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಸೋಪೋರ್‌ನ ಬೊಮೈಯಲ್ಲಿ ಭದ್ರತಾ ಪಡೆಗಳು ಒಬ್ಬ ಭಯೋತ್ಪಾದಕನನ್ನ ಹತ್ಯೆ ಮಾಡಲಾಗಿದೆ. ಇನ್ನು ಒಬ್ಬರಿಂದ ಇಬ್ಬರು ಭಯೋತ್ಪಾದಕರನ್ನ ಸುತ್ತುವರಿದಿದ್ದು, ಎನ್‌ಕೌಂಟರ್‌ ಮುಂದುವರೆದಿದೆ.

ಪೊಲೀಸರ ಪ್ರಕಾರ, ಮಂಗಳವಾರ ಮುಂಜಾನೆ, ಭದ್ರತಾ ಪಡೆಗಳು ಶೋಪಿಯಾನ್‌ನಲ್ಲಿ ಮೂವರು ಲಷ್ಕರ್-ಎ-ತೊಯ್ಬಾ (LeT) ಭಯೋತ್ಪಾದಕರನ್ನ ಕೊಂದಿದ್ದವು. ಹತ್ಯೆಗೀಡಾದ ಮೂವರು ಉಗ್ರರನ್ನು ಲಷ್ಕರ್-ಎ-ತೊಯ್ಬಾದ ದಾನಿಶ್ ಖುರ್ಷಿದ್ ಭಟ್, ತನ್ವೀರ್ ವಾನಿ ಮತ್ತು ತೌಸೀಫ್ ಭಟ್ ಎಂದು ಗುರುತಿಸಲಾಗಿದೆ. ಈತ ಹಲವು ಭಯೋತ್ಪಾದನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಹತ್ಯೆಗೀಡಾದ ಭಯೋತ್ಪಾದಕ ದಾನಿಶ್ ಭಟ್ ಭಯೋತ್ಪಾದಕರ ನೇಮಕಾತಿ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ.

ಕಳೆದ 2.5 ವರ್ಷಗಳಲ್ಲಿ ಶೋಪಿಯಾನ್‌ನಲ್ಲಿ ಕೇವಲ 150 ಭಯೋತ್ಪಾದಕರು ಹತರಾಗಿದ್ದಾರೆ ಮತ್ತು ಈಗ ಕೆಲವೇ ಕೆಲವು ಭಯೋತ್ಪಾದಕರು ಉಳಿದಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.

Share.
Exit mobile version