ಹಾಸನ : ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ದೊಡ್ಡ ಸಾಲಾವರ ಗ್ರಾಮದಲ್ಲಿ ಪತ್ನಿಯನ್ನು ನಾಡಬಂದೂಕಿನಿಂದ ಗುಂಡಿಕ್ಕಿ ಕೊಲೆ ಮಾಡಿ ಪತಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ದೊಡ್ಡ ಸಾಲಾವರ ಗ್ರಾಮದ ಹರೀಶ್‌ (50) ತನ್ನ ಹೆಂಡತಿ ಜಾಜಿ (45) ಗುಂಡಿಕ್ಕಿ ಕೊಲೆ ಮಾಡಿ, ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಪ್ರತಿದಿನ ಒಂದಲ್ಲ ಒಂದು ಕಾರಣಕ್ಕೆ ದಂಪತಿ ಜಗಳವಾಡುತ್ತಿದ್ದರು. ನಿನ್ನೆ ರಾತ್ರಿಯೂ ಮನೆಯಲ್ಲಿ ದಂಪತಿ ನಡುವೆ ಜಗಳವಾಗಿದೆ. ಸಿಟ್ಟಿಗೆದ್ದ ಪತಿ ಹರೀಶ್‌ ನಾಡ ಬಂದೂಕಿನಿಂದ ಗುಂಡು ಹಾರಿಸಿ ಪತ್ನಿ ಜಾಜಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅರೇಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share.
Exit mobile version