ಬೆಂಗಳೂರು : ಪ್ರಿಯಕರನೊಬ್ಬ ತನ್ನ ಪ್ರಿಯತಮೆಯನ್ನು ಚಾಕುವಿನಿಂದ ಭೀಕರವಾಗಿ ಕೊಲೆ ಮಾಡಿ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ನಡೆದಿದೆ.

ಹೌದು ಚಾಕುವಿನಿಂದ ಇರಿದು ಆಂಧ್ರಪ್ರದೇಶದ ಮೂಲದ ಪ್ರಿಯತಮೆ ಹೇಮಾವತಿ (35) ಎನ್ನುವವಳನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಮೂಲದ ವೇಣು ಎನ್ನುವ ವ್ಯಕ್ತಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ನಾಲ್ಕು ತಿಂಗಳ ಹಿಂದೆ ವೇಣು ಹೇಮಾವತಿಯನ್ನು ಹೊಸಕೋಟೆಯಲ್ಲಿ ಬಾಡಿಗೆ ಮನೆ ಮಾಡಿ ಆಕೆಯನ್ನು ಇರಿಸಿದ್ದ ಎನ್ನಲಾಗಿದೆ.

ಹೇಮಾವತಿ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡಿಕೊಂಡು ಒಂಟಿಯಾಗಿದ್ದಳು. ಆಗಾಗ ವೇಣು ಹೇಮಾವತಿ ಮನೆಗೆ ಬಂದು ಇದ್ದು ಹೋಗುತ್ತಿದ್ದ. ಆದರೆ ನಿನ್ನೆ ಮನೆಗೆ ಬಂದಿದ್ದ ವೇಣು ಕೊಲೆ ಮಾಡಿ ಮುಂಜಾನೆ ಅಲ್ಲಿಂದ ಪರಾರಿಯಾಗಿದ್ದಾನೆ.ಚಿಂತಾಮಣಿಗೆ ಹೋಗಿ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಕೂಡ ಯತಿದ್ದಾನೆ ಅಸ್ವಸ್ಥ ವೇಣುನನ್ನು ಚಿಕ್ಕಬಳ್ಳಾಪುರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೊಸಕೋಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share.
Exit mobile version