ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೋವಿಡ್ ರೂಪಾಂತರ ತಳಿ ಜೆಎನ್.1 (JN.1) ವೈರಸ್​​ ಅಟ್ಟಹಾಸ ಹೆಚ್ಚಳವಾಗುತ್ತಿದೆ.ದೇಶದ ವಿವಿಧ ರಾಜ್ಯಗಳಲ್ಲಿ ಕೋವಿಡ್ ಹೆಚ್ಚಿದೆ.ಕೇರಳ ಮತ್ತು ಕರ್ನಾಟಕದಲ್ಲಿ ಇದು ಮತ್ತಷ್ಟು ಹಬ್ಬಿದೆ.

ಇದುವರೆಗೆ ಜಿನೋಮ್‌ ಸೀಕ್ವೆನ್ಸ್‌ ಟೆಸ್ಟ್‌ಗೆ 601 ಸ್ಯಾಂಪಲ್ಸ್‌ಗಳ‌ ರವಾನಿಸಲಾಗಿದ್ದು ಈವರೆಗೆ 199 ಜನರಲ್ಲಿ ಜೆಎನ್.1 ವೈರಸ್ ಸೋಂಕು ತಗುಲಿದೆ.

202 ಮಾದರಿಗಳ ವರದಿಯಲ್ಲಿ 165 ಮಂದಿಯಲ್ಲಿ ಜೆಎನ್1 ಸೋಂಕು ತಗುಲಿದೆ.28 ಜನರಿಗೆ ಎಕ್ಸ್‌ಬಿಬಿ ಉಪ ತಳಿ ಸೋಂಕು ಇದ್ದು, 35 ಮಂದಿಯಲ್ಲಿ ಇತರೆ ರೂಪಾಂತರಿ ಸೋಂಕು ಪತ್ತೆಯಾಗಿದೆ.

Share.
Exit mobile version