ನವದೆಹಲಿ: ಕೆನಡಾ ಹೈಕಮಿಷನರ್ ಅವರನ್ನು ಇಂದು ಬೆಳಿಗ್ಗೆ ಕರೆಸಲಾಗಿದ್ದು, ಭಾರತ ಮೂಲದ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕಲು ಭಾರತ ಸರ್ಕಾರ ನಿರ್ಧರಿಸಿದೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಮಂಗಳವಾರ ತಿಳಿಸಿದೆ. ಮುಂದಿನ 5 ದಿನಗಳಲ್ಲಿ ಭಾರತವನ್ನು ತೊರೆಯುವಂತೆ ರಾಜತಾಂತ್ರಿಕರಿಗೆ ಸೂಚಿಸಲಾಗಿದೆ ಅಂತೆ.
ಪ್ರಮುಖ ಸಿಖ್ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಉನ್ನತ ರಾಜತಾಂತ್ರಿಕರಿಗೆ ವಿಶ್ವಾಸಾರ್ಹ ಸಂಪರ್ಕವಿದೆ ಎಂದು ಕ್ಯಾಂಡಿಯನ್ ವಿದೇಶಾಂಗ ಸಚಿವ ಮೆಲಾನಿ ಜೋಲಿ ಆರೋಪಿಸಿದ ಬೆನ್ನಲೇ ಈ ಘಟನೆ ನಡೆದಿದೆ. ಭಾರತದಲ್ಲಿನ ಕೆನಡಾದ ಹೈಕಮಿಷನರ್ ಕ್ಯಾಮರೂನ್ ಮೆಕೆ ಅವರನ್ನು ಇಂದು ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಾದ ಸೌತ್ ಬ್ಲಾಕ್ ಗೆ ಕರೆಸಲಾಯಿತು.
ಭಾರತದಲ್ಲಿನ ಕೆನಡಾದ ಹೈಕಮಿಷನರ್ ಅವರನ್ನು ಇಂದು ಕರೆಸಲಾಯಿತು ಮತ್ತು ಭಾರತ ಮೂಲದ ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ಮಾಹಿತಿ ನೀಡಲಾಯಿತು” ಎಂದು ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.