ಮಂಡ್ಯ: ಜಿಲ್ಲಾ ಕೇಂದ್ರದ ನೆಹರು ನಗರದಲ್ಲಿ ತಡರಾತ್ರಿ ಭೀಕರ ದುರಂತವೊಂದು ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ದಂಪತಿಗಳಾದ ಪ್ರಭಾಕರ್, ಜ್ಯೋತಿ ಹಾಗೂ ಅವರ ಪುತ್ರ ಸಂತೋಷ್ ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ನೆಹರು ನಗರದ ನಿವಾಸಿಯಾಗಿದ್ದ ಈ ಕುಟುಂಬದ ಮೂವರೂ ತಡರಾತ್ರಿ ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲವಾದರೂ, ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.








