ಕೊಪ್ಪಳ : ಕಳೆದ ಕೆಲವು ತಿಂಗಳುಗಳ ಹಿಂದೆ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣ ನಡೆದಿತ್ತು ಇದೀಗ ಇದೇ ಮಾದರಿಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮ ಕೊಪ್ಪಳ ವಿಭಾಗದಲ್ಲಿ 72 ಕೋಟಿ ರೂ. ದುರ್ಬಳಕೆಯಾಗಿರುವುದು ಬೆಳಕಿಗೆ ಬಂದಿದೆ.
ಹೌದು ಕೊಪ್ಪಳದ ಕೆಐಆರ್ಡಿಎಲ್ ನಲ್ಲಿ ಅಕ್ರಮ ನಡೆದಿದ್ದು, ಈ ಹಗರಣದಲ್ಲಿ ಭಾಗಿಯಾದ ಇಬ್ಬರು ಅಧಿಕಾರಿಗಳ ವಿರುದ್ದ ಕೊಪ್ಪಳ ಲೋಕಾಯುಕ್ತರಿಗೆ ದೂರು ನೀಡಲಾಗಿದೆ. 96 ಕಾಮಗಾರಿಗಳಲ್ಲಿ 72 ಕೋಟಿ ಸರ್ಕಾರಿ ಹಣವನ್ನ ದುರ್ಬಳಕೆ ಮಾಡಿರೋ ಬಗ್ಗೆ ಅಧಿಕಾರಿಗಳು ದಾಖಲೆಗಳನ್ನ ಸಲ್ಲಿಕೆ ಮಾಡಿದ್ದಾರೆ. 2019 ರಿಂದ 2025 ರ ವರೆಗೆ ಕೊಪ್ಪಳ ಜಿಲ್ಲೆಯ ವಿವಿದೆಡೆ ನಡೆದ 96 ಕಾಮಗಾರಿಗಳಲ್ಲಿ ಅಂದಿನ ಇಇ ಆಗಿದ್ದ ಝಡ್ ಎಂ ಚಿಂಚೋಳಿಕರ್ ಹಾಗೂ ಹೊರಗುತ್ತಿಗೆ ನೌಕರನಾಗಿದ್ದ ಕಳಕಪ್ಪ ನಿಡಗುಂದಿ ಎಂಬುವವರು 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದೆ.
ಈ ಹಿನ್ನೆಲೆ ಕೆಆರ್ಐಡಿಎಲ್ ಎಂಡಿ ಬಸವರಾಜ ನಿರ್ದೇಶನದ ಮೇರೆಗೆ ಕೊಪ್ಪಳ ವಿಭಾಗದ ಇಇ ಅನಿಲ್ಪಾಟೀಲ್, ನೆಲೋಗಿಪುರ ಉಪವಿಭಾಗದ ಆನಂದ ಕಾರ್ಲಕುಂಟಿ ಖುದ್ದಾಗಿ ಕೊಪ್ಪಳದ ಲೋಕಾಯುಕ್ತ ಕಚೇರಿಗೆ ತೆರಳಿ ಈ ಇಬ್ಬರು ಅಧಿಕಾರಿಗಳ ವಿರುದ್ದ ಕೇಸ್ ದಾಖಲಿಸಿದ್ದಾರೆ. 2019 ರಿಂದ 2025 ರ ವರೆಗಿನ ಕೊಪ್ಪಳ ಜಿಲ್ಲೆಯಲ್ಲಿ ವಿವಿದ ಗ್ರಾಮಗಳಲ್ಲಿ ಚರಂಡಿ, ರಸ್ತೆ, ಕುಡಿಯೋ ನೀರು ಸೇರಿ 96 ಕಾಮಗಾರಿಗಳನ್ನ ಮಾಡಿರೋದಾಗಿ ಕೊಟ್ಟಿ ಬಿಲ್ ಪಾವತಿ ಮಾಡುವ ಮೂಲಕ 72 ಕೋಟಿ ರೂ. ಹಣವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ, ಎಂದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ಸಂಪೂರ್ಣ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.
ಈ ಝಡ್ ಎಂ ಚಿಂಚೋಳಿಕರ್ ಅಧಿಕಾರಾವಧಿಯಲ್ಲಿ 72 ಕೋಟಿ ರೂ. ಸರ್ಕಾರಿ ಹಣ ದುರ್ಬಳೆ ಆಗಿದೆ. ಇದೆ ವಿಚಾರಕ್ಕೆ ಸರ್ಕಾರಕ್ಕೆ ಇವರನ್ನ ಸಸ್ಪೆಂಡ್ ಸಹ ಮಾಡಲಾಗಿತ್ತು. ಆದ್ರೆ ಅದೆ ಭ್ರಷ್ಟಾಚಾರ ಆರೋಪ ಹೊತ್ತ ಅಧಿಕಾರಿಯನ್ನ ಸದ್ಯ ದಾವಣಗೆರೆ ವಿಭಾಗ 2 ರಲ್ಲಿ ನಿಯೋಜನೆ ಮಾಡಲಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಭ್ರಷ್ಟಾಚಾರ ಮಾಡಿ, ಪ್ರಕರಣ ಲೋಕಾಯುಕ್ತದಲ್ಲಿ ತನಿಖೆ ಹಂತದಲ್ಲಿರೋ ವ್ಯಕ್ತಿಗೆ ಮತ್ತೆ ಆಡಳಿತಾತ್ಮಕ ಹುದ್ದೆ ನೀಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.