ಅಡಿಲೇಡ್: ಕಳೆದ ವಾರ ಅಡಿಲೇಡ್ನಲ್ಲಿ ತಡರಾತ್ರಿ ನಡೆದ ಪಾರ್ಟಿಯ ನಂತರ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರನ್ನು ಆಸ್ಪತ್ರೆಗೆ ಸಾಗಿಸಬೇಕಾದ ಘಟನೆಯ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ತನಿಖೆಯನ್ನು ಪ್ರಾರಂಭಿಸಿದೆ ಎನ್ನಲಾಗಿದೆ. ಸ್ತಳೀಯ ಆಸೀಸ್‌ ಮಾಧ್ಯಮಗಳ ವರದಿ ಪ್ರಕಾರ, ಮ್ಯಾಕ್ಸ್ವೆಲ್ ಅನಾರೋಗ್ಯದಿಂದ ಬಳಲುತ್ತಿದ್ದಾಗ ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಬ್ರೆಟ್ ಲೀ ಅಭಿನಯದ ‘ಸಿಕ್ಸ್ ಅಂಡ್ ಔಟ್’ ಬ್ಯಾಂಡ್ನ ಸಂಗೀತ ಕಚೇರಿಯನ್ನು ನೋಡುತ್ತ ಮದ್ಯಪಾನ ಮಾಡುತ್ತಿದ್ದರು ಎನ್ನಲಾಗಿದೆ.

“ವಾರಾಂತ್ಯದಲ್ಲಿ ಅಡಿಲೇಡ್ನಲ್ಲಿ ಗ್ಲೆನ್ ಮ್ಯಾಕ್ಸ್ವೆಲ್ ಭಾಗಿಯಾಗಿರುವ ಘಟನೆಯ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ತಿಳಿದಿದೆ ಮತ್ತು ಹೆಚ್ಚಿನ ಮಾಹಿತಿಯನ್ನು ಕೆಲ ಹಾಕುತ್ತಿದೆ ಅಂತ ತಿಳಿಸಿದೆ. ಆದಾಗ್ಯೂ, ಅಲ್ಪಾವಧಿಯ ವಾಸ್ತವ್ಯದ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಮತ್ತು ತರಬೇತಿಗೆ ಮರಳಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ, ಮ್ಯಾಕ್ಸ್ವೆಲ್ ಸರಣಿ ಗಾಯಗಳನ್ನು ಎದುರಿಸಿದರು ಆದರೆ ಅದರ ಹೊರತಾಗಿಯೂ, ಅವರು ವಿಶ್ವಕಪ್ನಲ್ಲಿ ಪ್ರಶಂಸನೀಯ ಪ್ರದರ್ಶನ ನೀಡಿದರು.

Share.
Exit mobile version