ನವದೆಹಲಿ: ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಆಜಾದ್ ಪಾರ್ಟಿ (DPAP) ಮುಖ್ಯಸ್ಥ ಗುಲಾಮ್ ನಬಿ ಆಜಾದ್ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದ್ದಾರೆ.

ಈ ಹಿಂದೆ, ಮಾಜಿ ಕಾಂಗ್ರೆಸ್ ನಾಯಕನನ್ನು ಅನಂತ್ನಾಗ್-ರಾಜೌರಿ ಸಂಸದೀಯ ಕ್ಷೇತ್ರದಿಂದ ಡಿಪಿಎಪಿ ನಾಮನಿರ್ದೇಶನ ಮಾಡಿತ್ತು.
ಅನಂತ್ ನಾಗ್’ನಲ್ಲಿ ಬುಧವಾರ ನಡೆದ ಸಭೆಯಲ್ಲಿ ಗುಲಾಂ ನಬಿ ಆಜಾದ್ ಈ ಘೋಷಣೆ ಮಾಡಿದ್ದಾರೆ.

ಏಪ್ರಿಲ್ 2 ರಂದು ಮಾಜಿ ಕೇಂದ್ರ ಸಚಿವ ಆಜಾದ್ ಅವರನ್ನು ಅನಂತ್ನಾಗ್-ರಾಜೌರಿ ಸ್ಥಾನದಿಂದ ಸ್ಪರ್ಧಿಸಲು ನಾಮನಿರ್ದೇಶನ ಮಾಡಲಾಯಿತು.

“ಡಿಪಿಎಪಿ ಅಧ್ಯಕ್ಷ ಗುಲಾಂ ನಬಿ ಆಜಾದ್ ಸಾಹಿಬ್ ಅವರು ಅನಂತ್ನಾಗ್-ರಾಜೌರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಇಂದಿನ ಡಿಪಿಎಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ” ಎಂದು ಪಕ್ಷದ ಮುಖ್ಯ ವಕ್ತಾರ ಸಲ್ಮಾನ್ ನಿಜಾಮಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು.

ಡಿಪಿಎಪಿ ಅಭ್ಯರ್ಥಿಯಾಗಿ ಆಜಾದ್ ಅವರು ಪಿಡಿಪಿಯ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ನ ಹಿರಿಯ ನಾಯಕ ಮಿಯಾನ್ ಅಲ್ತಾಫ್ ಅಹ್ಮದ್ ಅವರನ್ನ ಎದುರಿಸಬೇಕಿತ್ತು.

 

ಮತ್ತೆ ಶನಿವಾರ ರಾಜ್ಯಕ್ಕೆ ಮೋದಿ ಆಗಮನ ಬೃಹತ್‌ ಸಮಾವೇಶದಲ್ಲಿ ಭಾಗಿ

ಮತ್ತೆ ಶನಿವಾರ ರಾಜ್ಯಕ್ಕೆ ಮೋದಿ ಆಗಮನ ಬೃಹತ್‌ ಸಮಾವೇಶದಲ್ಲಿ ಭಾಗಿ

ಹೀಗಿದೆ ಕೋಲಾರದಲ್ಲಿ ಪ್ರಜಾಧ್ವನಿ-2 ಯಾತ್ರೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತಿನ ಹೈಲೈಟ್ಸ್

Share.
Exit mobile version