ನವದೆಹಲಿ : ಕಂಪನಿಗಳು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ದಿನಾಂಕವನ್ನ ನವೆಂಬರ್ 30 ರವರೆಗೆ ಒಂದು ತಿಂಗಳು ವಿಸ್ತರಿಸಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಇದಲ್ಲದೆ, ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ಕಂಪನಿಗಳು ಲೆಕ್ಕಪರಿಶೋಧನಾ ವರದಿಗಳನ್ನ ಸಲ್ಲಿಸುವ ದಿನಾಂಕವನ್ನ ಅಕ್ಟೋಬರ್ 31ರವರೆಗೆ ಒಂದು ತಿಂಗಳು ವಿಸ್ತರಿಸಲಾಗಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಹಣಕಾಸು ಸಚಿವಾಲಯ, “2023-24ರ ಮೌಲ್ಯಮಾಪನ ವರ್ಷಕ್ಕೆ ಫಾರ್ಮ್ ಐಟಿಆರ್ -7ರಲ್ಲಿ ಆದಾಯದ ರಿಟರ್ನ್ ಸಲ್ಲಿಸುವ ಕೊನೆಯ ದಿನಾಂಕವನ್ನ 31.10.2023 ರವರೆಗೆ ವಿಸ್ತರಿಸಲಾಗಿದೆ” ಎಂದು ತಿಳಿಸಿದೆ.
BREAKING: 33% ‘ಮಹಿಳಾ ಮೀಸಲಾತಿ’ ಮಸೂದೆ ಮಂಡನೆಗೆ ಕೇಂದ್ರ ಸಚಿವ ಸಂಪುಟ ‘ಗ್ರೀನ್ ಸಿಗ್ನಲ್’
BREAKING : ‘ಕೋಚಿಂಗ್ ಹಬ್ ಕೋಟಾ’ದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ, ಈ ವರ್ಷದಲ್ಲೇ ಇದು 26ನೇ ಪ್ರಕರಣ