BREAKING : ಚಾಮರಾಜನಗರದಲ್ಲಿ ಸಿಲಿಂಡರ್ ಸ್ಪೋಟ : ಇಬ್ಬರಿಗೆ ಗಂಭೀರ ಗಾಯ!
ಚಾಮರಾಜನಗರ : ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ವಾರ್ಡ್ ನಂ.16ರ ನಾಯಕರ ಬೀದಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಪರಮೇಶ್ ಸಿ ಮತ್ತು ಜ್ಯೋತಿ ಗಾಯಗೊಂಡವರು. ಸುಮಾರು 10.30ರ ವೇಳೆಗೆ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Copy and paste this URL into your WordPress site to embed
Copy and paste this code into your site to embed