ಕೆಎನ್ಎನ್‍ಡಿಜಿಟಲ್ ಡೆಸ್ಕ್ : ದಕ್ಷಿಣ ಆಫ್ರಿಕಾದ ಫ್ಲೈಸಫೇರ್’ಗೆ ತೆರಳುತ್ತಿದ್ದ ಬೋಯಿಂಗ್ 737 ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಅದರ ಮುಖ್ಯ ಚಕ್ರವೊಂದು ವಿಮಾನದಿಂದ ಹಾರಿಹೋದ ನಂತ್ರ ತುರ್ತು ಭೂಸ್ಪರ್ಶ ಮಾಡಿದೆ ಎಂದು ದಕ್ಷಿಣ ಆಫ್ರಿಕಾದ ಸುದ್ದಿ ಮಾಧ್ಯಮಗಳನ್ನ ಉಲ್ಲೇಖಿಸಿ ಸುದ್ದಿ ಸಂಸ್ಥೆ ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.

ದಕ್ಷಿಣ ಆಫ್ರಿಕಾದ ಜೋಹಾನ್ಸ್ ಬರ್ಗ್ ವಿಮಾನ ನಿಲ್ದಾಣದಿಂದ ಹೊರಟಿದ್ದ ಬೋಯಿಂಗ್ 737-800 ವಿಮಾನವು ಚಕ್ರವನ್ನ ಕಳೆದುಕೊಂಡಿದೆ. ನೆಲದ ಸಿಬ್ಬಂದಿ ಹಾನಿಯನ್ನ ಗುರುತಿಸಿ ಪೈಲಟ್’ಗಳಿಗೆ ಮಾಹಿತಿ ನೀಡಿದರು. ವಿಮಾನವು ಹಿಂತಿರುಗಿ ಸುರಕ್ಷಿತವಾಗಿ ಇಳಿಯಿತು.

 

ಪ್ರಯಾಣಿಕರಿಂದ ತುಂಬಿದ್ದ ವಿಮಾನವು ಜೋಹಾನ್ಸ್ಬರ್ಗ್’ನ ಒಆರ್ ಟಾಂಬೊ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇಯಲ್ಲಿ ಇಳಿಯುತ್ತಿದ್ದಂತೆ ಅಸುರಕ್ಷಿತ ವ್ಹೀಲ್ ಹಬ್ನಿಂದ ಹೊಗೆ ಹೊರಸೂಸಿತು.

ಸ್ವಲ್ಪ ಸಮಯದ ನಂತರ ಭಾರಿ ಸ್ಫೋಟದ ಸದ್ದು ಕೇಳಿಸಿತು ಮತ್ತು ವಿಮಾನವು ರನ್ವೇಯಲ್ಲಿ ನಿಂತಿತು. ಘಟನೆಯಲ್ಲಿ ಅಂಡರ್ ಕ್ಯಾರಿಯೇಜ್ ಮತ್ತು ಬಲ ರೆಕ್ಕೆ ಭಾಗಶಃ ಕುಸಿದಿದೆ ಎಂದು ವರದಿ ತಿಳಿಸಿದೆ.

ಯಾವುದೇ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಕೇಪ್ ಟೌನ್ ಗೆ ತೆರಳುತ್ತಿದ್ದ ವಿಮಾನವು ಟೇಕ್ ಆಫ್ ಆದ ಕೂಡಲೇ ಲ್ಯಾಂಡಿಂಗ್ ಚಕ್ರ ಕಾಣೆಯಾಗಿರುವುದನ್ನು ಗ್ರೌಂಡ್ ಸಿಬ್ಬಂದಿ ತ್ವರಿತವಾಗಿ ಗಮನಿಸಿದ್ದಾರೆ ಎಂದು ವರದಿ ತಿಳಿಸಿದೆ.

 

BREAKING : ‘ಕೊಟಕ್ ಮಹೀಂದ್ರಾ ಬ್ಯಾಂಕ್’ಗೆ ಬಿಗ್ ಶಾಕ್ : ‘ಹೊಸ ಗ್ರಾಹಕರ ಆನ್ಬೋರ್ಡ್’ಗೆ ‘RBI’ ನಿಷೇಧ

BREAKING: ಚುನಾವಣಾ ಪ್ರಚಾರ ಭಾಷಣದ ವೇಳೆಯೇ ಪ್ರಜ್ಞೆ ತಪ್ಪಿ ಬಿದ್ದು ‘ನಿತಿನ್ ಗಡ್ಕರಿ’ ಅಸ್ವಸ್ಥ | Nitin Gadkari fainted

PM Awas Yojana : ಪ್ರಧಾನಿ ಮೋದಿ 3ನೇ ಬಾರಿಗೆ ಅಧಿಕಾರಕ್ಕೆ ಬಂದರೇ ಮನೆ ಖರೀದಿಗೆ ’30 ಲಕ್ಷ’ ಸಬ್ಸಿಡಿ ಸಾಲ ಲಭ್ಯ

Share.
Exit mobile version