ಬೆಂಗಳೂರು : ಕಳೆದ ಶುಕ್ರವಾರ ಬೆಂಗಳೂರಿನ ಪೀಣ್ಯ 2ನೇ ಹಂತದಲ್ಲಿ ಬಿಎಂಟಿಸಿ ಬಸ್ಗೆ ಯುವತಿ ಸುಮಾ (25) ಬಲಿಯಾಗಿದ್ದಳು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯನ್ನು ಬಲಿ ಪಡೆದ ಬಿಎಂಟಿಸಿ ಕಂಡಕ್ಟರ್ ನನ್ನು ಇದೀಗ ಅಮಾನತುಗೊಳಿಸಲಾಗಿದೆ. ಚಾಲಕ ರಮೇಶನನ್ನು ಅಮಾನತುಗೊಳಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.
ಅಜಾತತೆಯಿಂದ ವಾಹನ ಚಲಾಯಿಸಿದ್ದಕ್ಕಾಗಿ ಕಂಡಕ್ಟರ್ ರಮೇಶ್ ನನ್ನ ಇದೀಗ ಬಿಎಂಟಿಸಿ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ವಿಚಾರಣೆ ಇತ್ಯರ್ಥ ಪೂರ್ವವೇ ರಮೇಶ್ ಅನ್ನು ಅಮಾನತುಗೊಳಿಸಲಾಗಿದೆ. ಸಂಬಳದ ಶೇ.50ರಷ್ಟು ಜೀವನಾಧಾರ ಭತ್ಯೆ ನೀಡಿ ಅಮಾನತುಗೊಳಿಸಲಾಗಿದೆ. ಇವಿ ಘಟಕ 22ರ ವಾಯುವ್ಯ ವಲಯದಲ್ಲಿ ರಮೇಶ್ ಕರ್ತವ್ಯ ನಿರ್ವಹಿಸುತ್ತಿದ್ದರು.
ಪೀಣ್ಯ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ FIR ದಾಖಲಾದ ಬಳಿಕ ರಮೇಶ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ ಕುಟುಂಬಸ್ಥರಿಗೆ ಬಿಎಂಟಿಸಿ 1, ಪರಿಹಾರ ಘೋಷಣೆ ಮಾಡಿದೆ. ಅಂತ್ಯಕ್ರಿಯ ವೇಳೆ ಬಿಎಂಟಿಸಿ ಅಧಿಕಾರಿಗಳು 50,000 ನೀಡಿದ್ದರು ಮೂರು ದಿನದ ಬಳಿಕ 50 ಸಾವಿರ ನೀಡುವ ಭರವಸೆ ನೀಡಿದೆ. ಅಲ್ಲದೆ ಮೃತ ಸುಮಾ ಕುಟುಂಬದವರಿಗೆ ವಿಮೆ ಹಣ ಕ್ಲೇಂ ಮಾಡಿಕೊಳ್ಳಿ ಎಂದು ಹೇಳಿ ಕೈತೊಳೆದುಕೊಂಡಿದೆ.