BREAKING : “ಮಾಜಿ ಪ್ರಧಾನಿ ‘ಶೇಖ್ ಹಸೀನಾ’ ಢಾಕಾಗೆ ಕಳುಹಿಸಿ” : ಕೇಂದ್ರ ಸರ್ಕಾರಕ್ಕೆ ಬಾಂಗ್ಲಾದೇಶ ಮನವಿ

ನವದೆಹಲಿ : ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನ ಭಾರತದಿಂದ ವಾಪಸ್ ಕಳುಹಿಸುವಂತೆ ಬಾಂಗ್ಲಾದೇಶ ಅಧಿಕೃತವಾಗಿ ಮನವಿ ಮಾಡಿದೆ. ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಾಂಗೀರ್ ಆಲಂ ಚೌಧರಿ ಸೋಮವಾರ ಅವ್ರನ್ನ ಹಸ್ತಾಂತರಿಸಲು ಅನುಕೂಲವಾಗುವಂತೆ ವಿದೇಶಾಂಗ ಸಚಿವಾಲಯಕ್ಕೆ ಔಪಚಾರಿಕ ಪತ್ರವನ್ನ ಕಳುಹಿಸಲಾಗಿದೆ ಎಂದು ದೃಢಪಡಿಸಿದರು. ಢಾಕಾದ ಪಿಲ್ಖಾನಾದಲ್ಲಿರುವ ಬಾರ್ಡರ್ ಗಾರ್ಡ್ ಬಾಂಗ್ಲಾದೇಶ (BGB) ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಜಹಾಂಗೀರ್ ಆಲಂ, “ಈಗಾಗಲೇ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಕಳುಹಿಸಲಾಗಿದೆ. ಹಸ್ತಾಂತರಕ್ಕಾಗಿ ಪ್ರಕ್ರಿಯೆ … Continue reading BREAKING : “ಮಾಜಿ ಪ್ರಧಾನಿ ‘ಶೇಖ್ ಹಸೀನಾ’ ಢಾಕಾಗೆ ಕಳುಹಿಸಿ” : ಕೇಂದ್ರ ಸರ್ಕಾರಕ್ಕೆ ಬಾಂಗ್ಲಾದೇಶ ಮನವಿ