BREAKING : ಬಿಜೆಪಿ ಬಳಿಕ ಕಾಂಗ್ರೆಸ್ ನಿಂದಲೂ `ಧರ್ಮಸ್ಥಳ ಚಲೋ’ : ಶಾಸಕ ರಂಗನಾಥ್ ನೇತೃತ್ವದಲ್ಲಿ 300 ಕಾರುಗಳಲ್ಲಿ ರ‍್ಯಾಲಿ

ಬೆಂಗಳೂರು : ಬೆಂಗಳೂರು: ಬಿಜೆಪಿ ನಾಯಕರಿಂದ ಧರ್ಮಸ್ಥಳ ಚಲೋ ನಡೆದ ಬಳಿಕ ಇದೀಗ ಕಾಂಗ್ರೆಸ್ ಶಾಸಕರಿಂದಲೂ ಧರ್ಮಸ್ಥಳ ಚಲೋ ಆರಂಭವಾಗಿದೆ. ಹೌದು, ಕುಣಿಗಲ್ ಶಾಸಕ ರಂಗನಾಥ್ ನೇತೃತ್ವದಲ್ಲಿ ಧರ್ಮಸ್ಥಳಕ್ಕೆ ಕಾರ್ ರ್ಯಾಲಿ ಶುರುವಾಗಿದೆ. 300 ಕಾರುಗಳಲ್ಲಿ ಕುಣಿಗಲ್ ನಿಂದ ಧರ್ಮಸ್ಥಳಕ್ಕೆ 300 ಕಾರುಗಳಲ್ಲಿ ರ್ಯಾಲಿ ನಡೆಸಲಾಗುತ್ತಿದೆ. ಧರ್ಮಸ್ಥಳ ಚಲೋಗೆ ಕಾಂಗ್ರೆಸ್ ಕಾರ್ಯಕರ್ತರೂ ಸಾಥ್ ನೀಡಿದ್ದು, ಇಂದು ಸಂಜೆ ಧರ್ಮಸ್ಥಳದ ಧರ್ಮಾಧಿಕಾರಿಗಳನ್ನು ಭೇಟಿಯಾಗಲಿದ್ದಾರೆ.