ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಡಿ ಆರ್ ಐ ಅಧಿಕಾರಿಗಳು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಕೆಎಬಿಯಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಕೊಕೆನ್ ಅನ್ನು ಜಪ್ತಿ ಮಾಡಿದ್ದಾರೆ.
ಪ್ರಯಾಣಿಕನಿಂದ DRI ಅಧಿಕಾರಿಗಳು ದೋಹಾದಿಂದ ಬೆಂಗಳೂರಿಗೆ ಬಂದಿದ್ದ ಭಾರತ ಮೂಲದ ಪ್ರಯಾಣಿಕನ ಬ್ಯಾಗ್ ಚೆಕ್ ಮಾಡುವ ವೇಳೆ 2 ಕಾಮಿಕ್ಸ್ ಪತ್ತೆಯಾಗಿದೆ.ಸೀಲ್ ಮಾಡಿದ ರೀತಿಯಲ್ಲಿ ಪತ್ತೆಯಾಗಿದೆ ಸುಮಾರು ನಾಲ್ಕು ಕೆಜಿ ಎಷ್ಟು ಕೊಕೆನ್ ಅನ್ನು ಡಿ ಆರ್ ಐ ಅಧಿಕಾರಿಗಳು ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಎನ್ ಡಿ ಪಿ ಎಸ್ ಆಕ್ಟ್ ನಡೆ ಪ್ರಯಾಣಿಕನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಲಾಗಿದೆ. ಈ ವೇಳೆ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ.