ಭಾರತೀಯ ನೌಕಾಪಡೆಗೆ ಮತ್ತೊಂದು ಬಲ : ‘ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ’ ಪರೀಕ್ಷಾರ್ಥ ಪ್ರಯೋಗ ಯಶಸ್ವಿ – Kannada News Now


India

ಭಾರತೀಯ ನೌಕಾಪಡೆಗೆ ಮತ್ತೊಂದು ಬಲ : ‘ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ’ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

ಹೊಸದಿಲ್ಲಿ : ಭಾರತೀಯ ನೌಕಾಪಡೆಯ ‘ಸ್ಟೈಟ್ ಡೆಸ್ಟಿನೇಷನ್’ ಐಎನ್ ಎಸ್ ನಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿಸಲಾಗಿದೆ. ಈ ಮೂಲಕ ಭಾರತೀಯ ಸೇನೆಗೆ ಮತ್ತೊಂದು ಬಲ ಬಂದಂತೆ ಆಗಿದೆ.

ಇಂದು ಚೆನ್ನೈನ ಅರಬ್ಬೀ ಸಮುದ್ರದಲ್ಲಿ ಭಾರತೀಯ ನೌಕಾಪಡೆಯಿಂದ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾಗಿ ನಡೆಸಲಾಗಿದೆ.  ಕ್ಷಿಪಣಿಯು ಉನ್ನತ ಮಟ್ಟದ ಮತ್ತು ಅತ್ಯಂತ ಸಂಕೀರ್ಣ ವಾದ ತಂತ್ರಗಳನ್ನು ಮಾಡಿದ ನಂತರ ಪಿನ್-ಪಾಯಿಂಟ್ ನಿಖರತೆಯೊಂದಿಗೆ ಗುರಿಯನ್ನು ಯಶಸ್ವಿಯಾಗಿ ಹೊಡೆದುರುಳಿಸಿತು. ಅರಬ್ಬಿ ಸಮುದ್ರದಲ್ಲಿ ಗುರಿ ಮುಟ್ಟಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ತಿಳಿಸಿದೆ.

ಬ್ರಹ್ಮೋಸ್ ಅನ್ನು ‘ಪ್ರಧಾನ ದಾಳಿ ಅಸ್ತ್ರ’ ಎಂದು ಪರಿಗಣಿಸಲಾಗುವುದು, ಇದು ಯುದ್ಧನೌಕೆಯ ಅಜೇಯತೆಯನ್ನು ಖಚಿತಪಡಿಸುತ್ತದೆ. ಇದು ದೂರಗಾಮಿ ನೆಲೆಗಳಲ್ಲಿ ನೌಕಾ ಮೇಲ್ಮೈ ಗುರಿಗಳನ್ನು ನಿಯೋಜಿಸುತ್ತದೆ. ಇದರಿಂದಾಗಿ ಭಾರತೀಯ ನೌಕಾಪಡೆಯ ಮತ್ತೊಂದು ಬಲ ಬಂದಂತಾಗಿದೆ.
error: Content is protected !!