ಸುಭಾಷಿತ :

Monday, December 9 , 2019 2:37 PM

ಇಂದು ವಿನೂತ ಶೈಲಿಯಲ್ಲಿ ಬಿಡುಗಡೆಯಾಗಲಿದೆ ‘ಬ್ರಹ್ಮಚಾರಿ’ಯ ಹಾಡು!


Friday, November 15th, 2019 9:41 am

ಸಿನಿಮಾಡೆಸ್ಕ್: ಇತ್ತೀಚೆಗೆ ಲಾಂಚ್ ಆಗಿದ್ದ ಟ್ರೇಲರ್ ಮೂಲಕ ಬ್ರಹ್ಮಚಾರಿಯ ಪಾಡು, ಪಡಿಪಾಟಲುಗಳು ಅನಾವರಣಗೊಂಡಿದ್ದವು. ಆ ಟ್ರೇಲರ್ ಮೂಲಕವೇ ನೀನಾಸಂ ಸತೀಶ್ ಮತ್ತು ಅದಿತಿ ಪ್ರಭುದೇವ ನಟಿಸಿರೋ ಬ್ರಹ್ಮಚಾರಿ ಚಿತ್ರ ಪ್ರೇಕ್ಷಕರನ್ನೆಲ್ಲ ಥ್ರಿಲ್ ಆಗಿಸುವಲ್ಲಿಯೂ ಯಶ ಕಂಡಿತ್ತು. ಫಸ್ಟ್ ನೈಟ್ ಟೀಸರ್, ನವೀನ್ ಸಜ್ಜು ಹಾಡಿರೂ ಹಿಡ್ಕ ಒಸಿ ತಡ್ಕ ಹಾಡು ಮತ್ತು ಮಜವಾದ ಟ್ರೇಲರ್ ಮೂಲಕ ಮಸ್ತ್ ಹವಾ ಸೃಷ್ಟಿಸಿರೋ ಬಹ್ಮಚಾರಿಯೀಗ ಮತ್ತೊಂದು ಹಾಡು ಕೇಳಿಸಲು ಮುಂದಾಗಿದ್ದಾನೆ. ಈ ಹಾಡನ್ನು ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಪ್ರಥಮವೆಂಬಂಥಾ ಕಾರ್ಯಕ್ರಮದ ಮೂಲಕ ಬಿಡುಗಡೆಗೊಳಿಸಲು ಚಿತ್ರತಂಡ ತಯಾರಾಗಿದೆ.

ಸಾಮಾನ್ಯವಾಗಿ ಆಡಿಯೋ, ಹಾಡುಗಳ ಬಿಡುಗಡೆಗೆ ಸಿದ್ಧ ಸೂತ್ರದ ಒಂದಷ್ಟು ಹಾದಿಗಳಿದ್ದಾವೆ. ಇತ್ತೀಚೆಗಂತೂ ಯೂಟ್ಯೂಬ್ ಮೂಲಕ ಅದನ್ನು ಲಾಂಚ್ ಮಾಡೋ ಟ್ರೆಂಡ್ ಚಾಲ್ತಿಯಲ್ಲಿದೆ. ಆದರೆ ಲೈವ್ ಆಗಿ ಹಾಡೋ ಮೂಲಕವೇ ಹಾಡೊಂದನ್ನು ಬಿಡುಗಡೆಗೊಳಿಸೋದು ಹೊಸತನದ ವಿದ್ಯಮಾನ. ಅದಕ್ಕೆ ಬ್ರಹ್ಮಚಾರಿ ಚಿತ್ರತಂಡ ಶ್ರೀಕಾರ ಹಾಕಲಿದೆ. ಅದರನ್ವಯ ಇಂದು ಸಂಜೆ ೬ ಗಂಟೆಗೆ ಸರಿಯಾಗಿ ಮಂತ್ರಿ ಮಾಲ್‌ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಅದರಲ್ಲಿ ಸಂಜಿತ್ ಹೆಗ್ಡೆ ಮತ್ತು ಸುಪ್ರಿಯಾ ಲೈವ್ ಪರ್ಫಾರ್ಮೆನ್ಸ್ ಕೊಡುವ ಮೂಲಕ ಈ ಹಾಡು ಬಿಡುಗಡೆಯಾಗಲಿದೆ.

ಬ್ರಹ್ಮಚಾರಿಯನ್ನು ಮತ್ತಷ್ಟು ಮಿರುಗಿಸುವಂತಿರೋ ಈ ಹಾಡನ್ನು ಕವಿರತ್ನ ಡಾ ವಿ ನಾಗೇಂದ್ರ ಪ್ರಸಾದ್ ಬರೆದಿದ್ದಾರೆ. ಅದಕ್ಕೆ ಧರ್ಮವಿಶ್ ಮಾಂತ್ರಿಕ ಸ್ವರೂಪದ ಸಂಗೀತ ಸ್ಪರ್ಶ ನೀಡಿದ್ದಾರೆ. ಸದ್ಯಕ್ಕೆ ಚಿತ್ರತಂಡ ಜಾಹೀರು ಮಾಡಿರೋದು ಇದಿಷ್ಟು ವಿಚಾರಗಳನ್ನು ಮಾತ್ರ. ಅಂದಹಾಗೆ ಈ ಕಾರ್ಯಕ್ರಮದಲ್ಲಿ ನೀವುಗಳೂ ಭಾಗಿಯಾಗಿ ಈ ಅಪರೂಪದ ಕ್ಷಣಗಳನ್ನು ಕಣ್ತುಂಬಿಕೊಳ್ಳಬಹುದು. ನಿಮ್ಮಿಚ್ಚೆಯಂತೆ ಈ ರಸಘಳಿಗೆಗಳ ಕವರೇಜ್‌ಗೂ ಅವಕಾಶ ಕಲ್ಪಿಸಲಾಗಿದೆ. ಈ ಹಾಡಿನ ಬಿಡುಗಡೆಯನ್ನೇ ಚಿತ್ರತಂಡ ಒಂದು ಅಚ್ಚುಕಟ್ಟಾದ ಈವೆಂಟ್‌ನಂತೆ ರೂಪಿಸಿದೆ. ನಿರ್ಮಾಪಕ ಉದಯ್ ಮೆಹ್ತಾ ಚಂದ್ರಮೋಹನ್‌ರ ಕನಸಿಗೆ ಸಾಥ್ ಕೊಟ್ಟಿದ್ದಾರೆ.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions