ಮೈಸೂರು: ನಗರದಲ್ಲಿ ದಂಪತಿಗಳೊಬ್ಬರ ಪುತ್ರನನ್ನು, ಅಪರಿಚಿತರು ನಿನ್ನೆ ಕಿಡ್ನಾಪ್ ಮಾಡಿದ್ದರು. ಅಲ್ಲದೇ ಪೋಷಕರಿಂದ ಹಣಕ್ಕೂ ಬೇಡಿಕೆ ಇಟ್ಟಿದ್ದರು ಎಂಬುದಾಗಿ ತಿಳಿದು ಬಂದಿದೆ. ಈ ಬಾಲಕನನ್ನು, ಅಪಹರಣಕ್ಕೆ ಒಳಗಾಗಿದ್ದಂತ ಕೆಲವೇ ಗಂಟೆಯಲ್ಲಿ ಪೊಲೀಸರು ರಕ್ಷಣೆ ಮಾಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ದೇವಸ್ಥಾನದ ಹೆಸರಿನಲ್ಲಿ ನಕಲಿ ವೆಬ್ ಸೈಟ್ ತೆರದು ಕೋಟಿ ಕೋಟಿ ವಂಚನೆ: ಅರ್ಚಕರ ವಿರುದ್ಧ FIR ದಾಖಲು
ಹೌದು.. ಅಪಹರಣಗೊಂಡಿದ್ದ ಮೈಸೂರಿನ ವೈದ್ಯ ದಂಪತಿಯ 12 ವರ್ಷದ ಬಾಲಕನ ರಕ್ಷಣೆ ಮಾಡಲಾಗಿದೆ. ಕುವೆಂಪುನಗರದ ಬಿಇಎಂಎಲ್ ಬಡಾವಣೆಯಲ್ಲಿ ನಿನ್ನೆ ಸಂಜೆ ಬಾಲಕನ ಅಪಹರಣ ಮಾಡಲಾಗಿತ್ತು. ಈ ಘಟನೆ ನಡೆದ ಕೆಲ ಗಂಟೆಗಳಲ್ಲಿ ಬಾಲಕನನ್ನು ಮೈಸೂರು ಪೊಲೀಸರು ರಕ್ಷಿಸಿದ್ದಾರೆ.
ಇನ್ನೂ ಬಾಲಕನನ್ನು ರಕ್ಷಿಸಿ, ಪೋಷಕರಿಗೆ ಮುಟ್ಟಿಸಿದ್ದಾರೆ. ಈ ಸಂಬಂಧ ಮತ್ತಷ್ಟು ಮಾಹಿತಿ ತಿಳಿದು ಬರಬೇಕಿದೆ.