ಸುಭಾಷಿತ :

Wednesday, January 22 , 2020 12:09 PM

ಬಾಕ್ಸಿಂಗ್ ಒಲಿಂಪಿಕ್ಸ್‌ ಟೆಸ್ಟ್‌ ಈವೆಂಟ್‌ : ಫೈನಲ್ ಪ್ರವೇಶಿಸಿದ ಭಾರತದ ಶಿವ ಥಾಪ, ಪೂಜಾ


Thursday, October 31st, 2019 8:22 am

ಟೋಕಿಯೊ: ಭಾರತದ ಬಾಕ್ಸರ್ ಶಿವ ಥಾಪ ಹಾಗೂ ಪೂಜಾ ರಾಣಿ ಟೋಕಿಯೋ ದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಒಲಿಂಪಿಕ್ಸ್‌ ಟೆಸ್ಟ್‌ ಈವೆಂಟ್‌ನಲ್ಲಿ ಫೈನಲ್‌ ಪ್ರವೇಶ ಮಾಡಿದ್ದಾರೆ.

ಬುಧವಾರ ನಡೆದ ಪುರುಷರ 63 ಕೆ.ಜಿ ವಿಭಾಗದಲ್ಲಿ ಅಂತಿಮ ನಾಲ್ಕರ ಘಟ್ಟದ ಪಂದ್ಯದಲ್ಲಿ ನಾಲ್ಕು ಬಾರಿ ಏಷ್ಯನ್ ಪದಕ ವಿಜೇತ ಶಿವ ಥಾಪ ಅವರು ಜಪಾನ್‌ನ ಡೈಸುಕ್ ನರಿಮಾಟ್ಸು ಅವರ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಪ್ರವೇಶ ಮಾಡಿದ್ದಾರೆ.

ಇನ್ನು, ಮಹಿಳೆಯರ 75 ಕೆ.ಜಿ ವಿಭಾಗದಲ್ಲಿ ಏಷ್ಯನ್ ಕ್ರೀಡಾಕೂಟದ ಕಂಚಿನ ಪದಕ ವಿಜೇತೆ ಭಾರತದ ಪೂಜಾ ರಾಣಿ ಅವರು ಬ್ರೆಜಿಲ್ ನ ಬೀಟ್ರಿಝ್ ಸೋರ್ಸ್ ಅವರ ವಿರುದ್ಧ ಸರ್ವಾನುಮತದ ಆಧಾರದ ಮೇಲೆ ಫೈನಲ್‌ಗೆ ಲಗ್ಗೆ ಇಟ್ಟರು. ಪೂಜಾ ರಾಣಿ ಅವರು ವರ್ಷದ ಆರಂಭದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Health
Sandalwood
Food
Beauty Tips
Astrology
Cricket Score
Poll Questions