ನವದೆಹಲಿ : ಭಾರತೀಯ ಜನತಾ ಪಕ್ಷವು ಮೂರನೇ ಬಾರಿಗೆ ಸರ್ಕಾರ ರಚಿಸುವ ಹಾದಿಯಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಮತ್ತು ಪಕ್ಷದ ವಿಜಯವು ದೇಶದ ಷೇರುಪೇಟೆಯಲ್ಲಿ ದಾಖಲೆಯ ಜಿಗಿತವನ್ನ ಕಾಣಲಿದೆ. ಜೂನ್ 4 ರಂದು ಬಿಜೆಪಿ ದಾಖಲೆಯ ಅಂಕಿಅಂಶಗಳನ್ನು ಮುಟ್ಟುವುದರೊಂದಿಗೆ ಷೇರು ಮಾರುಕಟ್ಟೆಯು ಹೊಸ ದಾಖಲೆಯ ಎತ್ತರವನ್ನ ಮುಟ್ಟಲಿದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ ಎಂದು ಪ್ರಧಾನಿ ಮೋದಿ ಹೇಳಿದರು.

2014ರಲ್ಲಿ 25,000 ಅಂಕಗಳಿದ್ದ ಸೆನ್ಸೆಕ್ಸ್ 2024ರಲ್ಲಿ 75,000ಕ್ಕೆ ಏರಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಹೂಡಿಕೆದಾರರು ತಮ್ಮ ಸರ್ಕಾರದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದೂ ಅವರು ಹೇಳಿದರು. ಶೇರು ಮಾರುಕಟ್ಟೆಯು ನಮ್ಮಲ್ಲಿ ಹೊಂದಿರುವ ವಿಶ್ವಾಸ ಕಳೆದ ದಶಕದಲ್ಲಿ ನಮ್ಮ ಗಮನಾರ್ಹ ಸಾಧನೆಯಲ್ಲಿ ಪ್ರತಿಫಲಿಸುತ್ತದೆ ಎಂದರು. ಇನ್ನು ನಾವು ಅಧಿಕಾರ ವಹಿಸಿಕೊಂಡಾಗ ಸೆನ್ಸೆಕ್ಸ್ ಸುಮಾರು 25,000 ಪಾಯಿಂಟ್‌ಗಳಷ್ಟಿತ್ತು. ಇಂದು, ಇದು ಸುಮಾರು 75000 ಪಾಯಿಂಟ್‌ಗಳಲ್ಲಿ ನಿಂತಿದೆ, ಇದು ಐತಿಹಾಸಿಕ ಬೆಳವಣಿಗೆಯನ್ನ ತೋರಿಸುತ್ತದೆ. ಇತ್ತೀಚೆಗೆ ನಾವು ಮೊದಲ ಬಾರಿಗೆ 5 ಟ್ರಿಲಿಯನ್ ಡಾಲರ್‌’ಗಳ ಮಾರುಕಟ್ಟೆ ಕ್ಯಾಪ್ ತಲುಪಿದ್ದೇವೆ ಎಂದು ಹೇಳಿದರು.

ಪ್ರಧಾನಿ ಮೋದಿ, “ಕಳೆದ 10 ವರ್ಷಗಳಲ್ಲಿ, ನೀವು ಡಿಮ್ಯಾಟ್ ಖಾತೆಗಳ ಸಂಖ್ಯೆಯನ್ನ ಗಮನಿಸಿದರೆ, ಭಾರತೀಯ ಆರ್ಥಿಕತೆಯ ಮೇಲೆ ನಾಗರಿಕರು ಹೇಗೆ ವಿಶ್ವಾಸವನ್ನ ತೋರಿಸುತ್ತಿದ್ದಾರೆ ಅನ್ನೋದನ್ನ ನೀವು ಅರ್ಥಮಾಡಿಕೊಳ್ಳುತ್ತೀರಿ. ಮ್ಯೂಚುವಲ್ ಫಂಡ್ ಹೂಡಿಕೆದಾರರ ಸಂಖ್ಯೆ 2014ರಲ್ಲಿ 1 ಕೋಟಿಯಿಂದ ಹೆಚ್ಚಾಗಿದೆ. ಇಂದು ಅದು 4.5 ಕೋಟಿಯಾಗಿದೆ” ಎಂದರು.

 

‘PSI’ ಗೆ ಧಮ್ಕಿ ಹಾಕಿದ ಕೇಸ್ : ಬಂಧನದ ಭೀತಿ ಹಿನ್ನೆಲೆ ಹೈಕೋರ್ಟ್ ಮೊರೆ ಹೋದ ಶಾಸಕ ಹರೀಶ್ ಪೂಂಜಾ

ಗೃಹ ಸಚಿವರನ್ನು ಕೂಡಲೇ ವಜಾ ಮಾಡಲು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಆಗ್ರಹ

24 ಗಂಟೆಯೊಳಗೆ ರಘುಪತಿ ಭಟ್ ಚುನಾವಣಾ ಕಣದಿಂದ ನಿವೃತ್ತರಾಗದಿದ್ದರೆ ಶಿಸ್ತು ಕ್ರಮ : ಸುನೀಲ್ ಕುಮಾರ್

Share.
Exit mobile version