ಬಾಲಿವುಡ್ ನ ಯುವ ಹಾಸ್ಯ ನಟ ಮೋಹಿತ್‌ ಬಘೇಲ್ ಕ್ಯಾನ್ಸರ್ ನಿಂದ ನಿಧನ – Kannada News Now


Bollywood Film

ಬಾಲಿವುಡ್ ನ ಯುವ ಹಾಸ್ಯ ನಟ ಮೋಹಿತ್‌ ಬಘೇಲ್ ಕ್ಯಾನ್ಸರ್ ನಿಂದ ನಿಧನ

ಸಿನಿಮಾ ಡೆಸ್ಕ್ : ಬಾಲಿವುಡ್ ನಲ್ಲಿ ಇತ್ತೀಚೆಗಷ್ಟೇ ಇಬ್ಬರು ಮಹಾನ್ ನಟರಾದ ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಯುವ ನಟ ಸಾವನ್ನಪ್ಪಿದ್ದಾನೆ. ಮಥುರಾದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದ ಹಾಸ್ಯ ನಟ ಮೋಹಿತ್‌ ಬಘೇಲ್‌ ಶನಿವಾರ ಕೊನೆಯುಸಿರೆಳೆದರು.

ಉತ್ತರ ಪ್ರದೇಶದವರಾದ ಮೋಹಿತ್‌ ಬಘೇಲ್‌ ‘ಚೋಟೆ ಮಿಯಾ’ ಕಾಮಿಡಿ ಶೋ ಮೂಲಕ ಜನಪ್ರಿಯರಾಗಿದ್ದರು. ನಂತರ ಅವರಿಗೆ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸಲ್ಮಾನ್‌ ಖಾನ್‌ ಜೊತೆ ‘ರೆಡಿ’ ಚಿತ್ರದಲ್ಲಿ , ಸಿದ್ದಾರ್ಥ್‌ ಮಲ್ಹೋತ್ರಾ ಮತ್ತು ಪರಿಣೀತಿ ಚೋಪ್ರಾ ಜೋಡಿಯಾಗಿ ನಟಿಸಿದ್ದ ‘ಜಬರಿಯಾ ಜೋಡಿ’ ಸಿನಿಮಾದಲ್ಲೂ ಮೋಹಿತ್‌ ಬಣ್ಣ ಹಚ್ಚಿದ್ದರು.

ಮುಂಬರುವ ‘ಬಂಟಿ ಔರ್‌ ಬಬ್ಲಿ 2’ ಚಿತ್ರದಲ್ಲೂ ಮೋಹಿತ್‌ ನಟಿಸಬೇಕಿತ್ತು. ಆದರೆ ಅದಕ್ಕೂ ಮುನ್ನ ಯುವ ನಟ ಇಹಲೋಕ ತ್ಯಜಿಸಿದ್ದಾರೆ. ಪರಿಣೀತಿ ಚೋಪ್ರಾ, ಸಿದ್ದಾರ್ಥ್‌ ಮಲ್ಹೋತ್ರಾ ಮುಂತಾದವರು ಕೂಡ ಮೋಹಿತ್‌ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

2019ರ ಡಿಸೆಂಬರ್‌ನಲ್ಲಿ ಮೋಹಿತ್‌ಗೆ ಕ್ಯಾನ್ಸರ್‌ ಇರುವುದು ಖಚಿತವಾಗಿತ್ತು. ಕಳೆದ 6 ತಿಂಗಳಿನಿಂದ ಅವರು ಮಥುರಾ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.