ಸುಭಾಷಿತ :

Tuesday, February 18 , 2020 1:53 PM

24 ‘ಆ್ಯಸಿಡ್ ಬಾಟಲಿ’ ಖರೀದಿಸಿದ ಬಾಲಿವುಡ್ ನ ಟಾಪ್ ನಟಿ…ಕಾರಣ ಗೊತ್ತೇ…?


Thursday, January 16th, 2020 7:32 pm

ನ್ಯೂಸ್ ಡೆಸ್ಕ್ :  ಸುಪ್ರೀಂಕೋರ್ಟ್ ರೂಲ್ಸ್ ಪ್ರಕಾರ ಆ್ಯಸಿಡ್ ಖರೀದಿಸಬೇಕು ಎಂದರೆ ಖರೀದಿಸುವ ವ್ಯಕ್ತಿಯ ಗುರುತಿನಚೀಟಿ ಪರಿಶೀಲಿಸಿ, ವಿಳಾಸವನ್ನೂ ಅಂಗಡಿಯವ ಪಡೆಯಬೇಕು. ಬಳಿಕ ಪೊಲೀಸ್ ಇಲಾಖೆಗೆ ಸುದ್ದಿ ಮುಟ್ಟಿಸಬೇಕು, ಆದ್ರೆ ಇದ್ಯಾವ ನಿಯಮವನ್ನು ಅಂಗಡಿಯವರು ಪಾಲಿಸುತ್ತಿಲ್ಲ ಎಂಬ ಕಾರಣಕ್ಕೆ ನಟಿ ದೀಪಿಕಾ ಪಡುಕೋಣೆ ಸ್ಟಿಂಗ್ ಆಪರೇಷನ್ ಮಾಡಿದ್ದಾರೆ.

ಅಂಗಡಿಗಳಲ್ಲಿ ಬೇಕಾಬಿಟ್ಟಿ ಆ್ಯಸಿಡ್ ಮಾರಾಟ ಮಾಡಲಾಗುತ್ತಿದೆ ಎಂದು ದೀಪಿಕಾ ಪಡುಕೋಣೆ ಆತಂಕ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಆ್ಯಸಿಡ್ ಖರೀದಿಸುವುದು ತುಂಬಾ ಸುಲಭ, ತಮ್ಮ ತಂಡದ ಸ್ಟಿಂಗ್ ಆಪರೇಷನ್ ಮೂಲಕ 24 ಆ್ಯಸಿಡ್ ಬಾಟಲಿಗಳನ್ನು ಖರೀಸಿದ್ದಾಗಿ ಅವರು ತಿಳಿಸಿದ್ದಾರೆ.

ಚಪಾಕ್ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದು, ಆಸಿಡ್ ಸಂತ್ರಸ್ತೆ ಲಕ್ಷ್ಮಿ ಅಗರ್ವಾಲ್ ಅವರ ಬದುಕಿನ ಕಥೆಯಾಧಾರಿತ ಚಿತ್ರವಾಗಿದೆ., ದೀಪಿಕಾ ಇಲ್ಲಿ ಮಾಲ್ತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಮೇಘನಾ ಗುಲ್ಜಾರ್ ನಿರ್ದೇಶನದ ಚಪಾಕ್ ಚಿತ್ರಕ್ಕೆ ದೀಪಿಕಾ ಅವರು ಸಹ ಫಾಕ್ಸ್ ಸ್ಟಾರ್ ಸ್ಟುಡಿಯೊ ಜೊತೆ ಬಂಡವಾಳ ಹೂಡಿದ್ದಾರೆ. ಲಕ್ಷ್ಮಿ ಅಗರ್ವಾಲ್ 15 ವರ್ಷದ ಹುಡುಗಿಯಾಗಿದ್ದಾಗ ಪರಿಚಯದ 32 ವರ್ಷದ ವ್ಯಕ್ತಿಯಿಂದ ಆಸಿಡ್ ದಾಳಿಗೊಳಗಾಗಿದ್ದರು. ನಂತರ ಹಲವು ಸರ್ಜರಿಗೊಳಗಾಗಿದ್ದರು. ನಂತರ ಲಕ್ಷ್ಮಿ ಆಸಿಡ್ ಸಂತ್ರಸ್ತರ ಬದುಕಿಗಾಗಿ ಮತ್ತು ಅಂತಹ ದಾಳಿಗಳನ್ನು ನಿಲ್ಲಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions