ನವದೆಹಲಿ : ಬಾಲಿವುಡ್ ನಟ ವಿಕ್ರಮ್ ಗೋಖಲೆ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಕೆಲ ತಿಂಗಳುಗಳಿಂದ ಅಂಗಾಂಗ ವೈಫಲ್ಯದಿಂದ ನಟ ಬಳಲುತ್ತಿದ್ದರು. ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
BIGG NEWS : 466 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ; ಯೆಸ್ ಬ್ಯಾಂಕ್ ಮಾಜಿ ಎಂಡಿ ‘ರಾಣಾ ಕಪೂರ್’ಗೆ ಜಾಮೀನು
ಹಿಂದಿ, ಮರಾಠಿ ಹೀಗೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟ ವಿಕ್ರಮ್ ಗೋಖಲೆ (75 ವರ್ಷ) ಆರೋಗ್ಯ ಇತ್ತೀಚೆಗೆ ಏರುಪೇರಾಗಿದ್ದು, ತಕ್ಷಣ ಪೂಣೆಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟ ಇದೀಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕಣ್ಣು ತೆರೆದು ಕುಟುಂಬದವರ ಬಳಿ ಮಾತನಾಡುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. 48 ಗಂಟೆಗಳಲ್ಲಿ ವೆಂಟಿಲೇಟರ್ನಿಂದ ಹೊರತೆಗೆಯಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
BIGG NEWS : 466 ಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣ ; ಯೆಸ್ ಬ್ಯಾಂಕ್ ಮಾಜಿ ಎಂಡಿ ‘ರಾಣಾ ಕಪೂರ್’ಗೆ ಜಾಮೀನು
ಬಿಗ್ ಬಿ ಜೊತೆ ʻಅಗ್ನಿಪಥ್ʼ, ಸಲ್ಮಾನ್ ಖಾನ್ ಜೊತೆ ʻಹಮ್ ದಿಲ್ ದೇ ಚುಕೇ ಸನಮ್ʼ, ಶಿಲ್ಪಾ ಶೆಟ್ಟಿ ನಟನೆಯ `ನಿಕ್ಕಮ್ಮಾ’ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ವಿಕ್ರಮ್ ಗೋಖಲೆ ನಟಿಸಿದ್ದಾರೆ.