ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ನಿಧನ ಹೊಂದಿ ಎರಡು ವರ್ಷ ಕಳೆದ್ರೂ ಅವರ ಸಾವಿಗೆ ನಿಕರ ಕಾರಣವೇನು ಎಂದು ತಿಳಿದುಬಂದಿಲ್ಲ. ಇದು ಆತ್ಮಹತ್ಯೆಯೋ… ಕೊಲೆಯೋ ಎಂದು ಕೆಲವರು ಉಲ್ಲೇಖಿಸುವುದರಲ್ಲೇ ಇದ್ದಾರೆ.
ಒಬ್ಬೊಬ್ಬರ ವಾದ ಒಂದು ರೀತಿಯಲ್ಲಿ ಬಿಂಬಿಸುತ್ತಿದ್ದಾರೆ. ಈ ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಇದರ ಪ್ರಮುಖ ಆರೋಪಿ ಆಗಿರುವ ರಿಯಾ ಚಕ್ರವರ್ತಿ ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ. ಸದ್ಯ ಅವರಿಗೆ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಈ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯಕ್ಕೆ ಎನ್ ಸಿಬಿ ಚಾರ್ಜ್ ಶೀಟ್ ಸಲ್ಲಿಸಿದೆ.
ಈ ಕುರಿತು ಅತೀ ಶೀಘ್ರದಲ್ಲೇ ತೀರ್ಪು ಹೊರಗೆ ಬರಲಿದೆ. ಅದಕ್ಕಾಗಿ ಸುಶಾಂತ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇಂದಿಗೂ ಸಹ ಸುಶಾಂತ್ ಸಾವಿಗೆ ನ್ಯಾಯ ಸಿಗಬೇಕೆಂದು ಅದೆಷ್ಟೋ ಮಂದಿ ಹೋರಾಟ ಮಾಡುತ್ತಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಂಡು ಸುಶಾಂತ್ ಸಾವಿಗೆ ಕಾರಣ ಆದವರಿಗೆ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.