ಸುಭಾಷಿತ :

Tuesday, January 28 , 2020 2:07 PM

ಬೋಲಿವಿಯಾದಲ್ಲಿ ತೀವ್ರಗೊಂಡ ಹಿಂಸಾಚಾರ : ಅಧ್ಯಕ್ಷ ಸ್ಥಾನಕ್ಕೆ ಇವೋ ಮೊರಾಲೆಸ್ ರಾಜೀನಾಮೆ


Monday, November 11th, 2019 4:56 pm

ನ್ಯೂಸ್ ಡೆಸ್ಕ್ : ಕಳೆದೊಂದು ತಿಂಗಳಿನಿಂದ ಬೋಲಿವಿಯಾದಲ್ಲಿ ಹಿಂಸಾಚಾರ ತಾರಕಕ್ಕೇರಿದ್ದು, ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಇವೋ ಮೊರಾಲೆಸ್ ವಿರುದ್ಧ ಭಾರಿ ಆಕ್ರೋಶವೇ ವ್ಯಕ್ತವಾಗಿದೆ. ಕಳೆದ ರಾತ್ರಿಯಿಂದ ಬೋಲಿವಿಯಾದ ಹಲವೆಡೆ ಅಶಾಂತಿ ಮತ್ತಷ್ಟು ಭುಗಿಲೆದ್ದ ಕಾರಣ ಅಧ್ಯಕ್ಷ ಇವೋ ಮೊರಾಲೆಸ್  ರಾಜೀನಾಮೆ ನೀಡಿದ್ದಾರೆ.

ಅಕ್ಟೋಬರ್ 20ರಂದು ಬೋಲಿವಿಯಾದಲ್ಲಿ ಅಧ್ಯಕ್ಷ ಚುನಾವಣೆ ನಡೆದಿತ್ತು. ಈ ವೇಳೆ, ವಿವಾದ ಉದ್ಭವಿಸಿ ದೇಶದಲ್ಲಿ ತೀವ್ರ ಪ್ರತಿಭಟನೆ ಎದುರಾಗಿತ್ತು. ಪರಿಸ್ಥಿತಿ ನಿಯಂತ್ರಣ ನಿಜಕ್ಕೂ ಸವಾಲಾಗಿ ಪರಿಣಮಿಸಿತ್ತು. ಇನ್ನು ನಿನ್ನೆಯಿಂದ ಹಿಂಸಾಚಾರ ಹೆಚ್ಚಾಗಿದ್ದು, ಮೊರಾಲೆಸ್ ಕೂಡಲೇ ಅಧಿಕಾರದಿಂದ ಕೆಳಗಿಳಿಯಬೇಕೆಂದು ಸೇನಾಪಡೆ ಎಚ್ಚರಿಕೆ ನೀಡಿತ್ತು. ಇದೇ ವೇಳೆ, ಕಳೆದ ರಾತ್ರಿ ಲಾ ಪಾಝ್ ಹಾಗೂ ಕೆಲವು ಕಟ್ಟಡಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತವಾಗಿದ್ದು, ಬೀದಿಗಳಲ್ಲಿ ಘರ್ಷಣೆ ನಡೆದಿರುವುದು ವರದಿಯಾಗಿತ್ತು.

ಇವೋ ಮೊರಾಲೆಸ್ ಕಳೆದ ಹದಿನಾಲ್ಕು ವರ್ಷಗಳಿಂದ ಬೋಲಿವಿಯಾದ ಅಧ್ಯಕ್ಷರಾಗಿದ್ದರು. ಆದರೆ, ಈ ಚುನಾವಣೆಯಲ್ಲಿಯೂ ಗೆಲುವು ಸಾಧಿಸಿದ್ದು, ದೇಶದಲ್ಲಿ ಹಿಂಸಾಚಾರಕ್ಕೆ ಎಡೆಮಾಡಿಕೊಟ್ಟಿತ್ತು. ದೇಶದಲ್ಲಿ ಸ್ಥಿರತೆಯನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿದ್ದಾರೆ. ಮತ್ತೊಂದೆಡೆ  ಗೊಂದಲದ ಸ್ಥಿತಿಯ ನಡುವೆಯೇ ತನ್ನ ಬಂಧನಕ್ಕೆ ಕಾನೂನು ಬಾಹಿರವಾಗಿ ಪೊಲೀಸರು ವಾರಂಟ್ ಹೊರಡಿಸಿದ್ದಾರೆ.ಉದ್ರಿಕ್ತರ ಗುಂಪೊಂದು ತಮ್ಮ ಮನೆಯ ಮೇಲೆ ದಾಳಿ ನಡೆಸಿದೆ ಎಂತಲೂ ಇವೋ ಮೊರಾಲೆಸ್ ಆರೋಪಿಸಿದ್ದಾರೆ…

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Bollywood
Birthday Wishes
BELIEVE IT OR NOT
Astrology
Cricket Score
Poll Questions