ಚಂಬಲ್ ನದಿಯಲ್ಲಿ ಮುಳುಗಿದ ದೋಣಿ, ಓರ್ವ ಸಾವು, 12 ಜನರು ಕಣ್ಮರೆ – Kannada News Now


India

ಚಂಬಲ್ ನದಿಯಲ್ಲಿ ಮುಳುಗಿದ ದೋಣಿ, ಓರ್ವ ಸಾವು, 12 ಜನರು ಕಣ್ಮರೆ

ಕೋಟಾ : 50 ಭಕ್ತರಿದ್ದ ದೋಣಿಯೊಂದು ಮುಳುಗಿ ಓರ್ವ ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿರುವ ಘಟನೆ ರಾಜಸ್ಥಾನದ ಕೋಟಾ ಜಿಲ್ಲೆಯ ಚಂಬಲ್ ನದಿಯಲ್ಲಿ ನಡೆದಿದೆ.

ದೋಣಿ ಮೂಲಕ ಕಮಲೇಶ್ವರ್ ಧಾಮ್ ಬಂಡಿ ಪ್ರದೇಶಕ್ಕೆ ಸುಮಾರು 50 ಮಂದಿ ಭಕ್ತರು ತೆರಳುತ್ತಿದ್ದರು. ಈ ವೇಳೆ ದೋಣಿ ಮುಗುಚಿದ್ದು, ಜನರೆಲ್ಲರೂ ನೀರಿಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು 15 ಜನರನ್ನು ರಕ್ಷಣೆ ಮಾಡಿದ್ದು, 12 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಇಂದು ಬೆಳಗ್ಗೆ 8.15 ರ ಸುಮಾರಿಗೆ ದೋಣಿ ಮುಳುಗಿದ್ದು, ನಾಪತ್ತೆಯಾಗಿದ್ದರ ಶೋಧನೆಗಾಗಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ.