ಬೆಂಗಳೂರು: ಬಿಎಂಎಸ್‌ ಟ್ರಸ್ಟ್‌ ಅವ್ಯವಹಾರ ಕುರಿತು ಬಿಜೆಪಿ- ಜೆಡಿಎಸ್‌ ಮಧ್ಯೆ ಕಲಾಪದಲ್ಲಿ ಗದ್ದಲ ಜೋರಾಗಿದೆ. ಜೆಡಿಎಸ್‌ ಧರಣಿ ಮುಂದುವರೆಸಿದ್ದಾರೆ.

BIGG NEWS: ವಿಜಯನಗರದಲ್ಲಿ ಘರ್ಜಿಸಲಿದೆ ಬುಲ್ಡೋಜರ್; 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್‌

ಬಿಎಂಎಸ್ ಸಾರ್ವಜನಿಕ ಟ್ರಸ್ಟ್​ನ್ನು ಖಾಸಗಿ ಟ್ರಸ್ಟ್ ಆಗಿ ಪರಿವರ್ತಿಸಿದ ಸಂಬಂಧ ನಿನ್ನೆ ದಾಖಲೆ ಬಿಡುಗಡೆ ಮಾಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತನಿಖೆಗೆ ಆಗ್ರಹಿಸಿದ್ದರು.
ಸದನ ಆರಂಬವಾಗುತ್ತಿದ್ದಂತೆ ಜೆಡಿಎಸ್‌ ಸದಸ್ಯರು ಬಾವಿಗಿಳಿದು ಧರಣಿ ಮಾಡಿದ್ದಾರೆ. ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ವಿರುದ್ಧ ಧಿಕ್ಕಾರ ಕೂಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಇದು ಗಂಭೀರವಾದ ಪ್ರಕರಣ, ಸರ್ಕಾರದ ಅಧಿಕಾರಿಗಳು ಟ್ರಸ್ಟ್​ನಲ್ಲಿ ನಡೆಯುತ್ತಿರುವ ಲೋಪದೋಷಗಳ ಬಗ್ಗೆ ಗಮನಕ್ಕೆ ತಂದಿಲ್ಲ ಎಂದು ಆರೋಪಿಸಿದರು.

BIGG NEWS: ವಿಜಯನಗರದಲ್ಲಿ ಘರ್ಜಿಸಲಿದೆ ಬುಲ್ಡೋಜರ್; 40ಕ್ಕೂ ಹೆಚ್ಚು ಮನೆಗಳಿಗೆ ನೋಟಿಸ್‌

 

ಅಲ್ಲದೇ, ಈ ಬಗ್ಗೆ ಸಚಿವರು ಉತ್ತರ ನೀಡಿಲ್ಲ ಹಾಗೂ ಸರ್ಕಾರವೂ ಉತ್ತರ ನೀಡಿಲ್ಲ. ಸರ್ಕಾರದ ಜವಾಬ್ದಾರಿಗೆ ಧಕ್ಕೆ ಉಂಟಾಗುವ ರೀತಿಯಲ್ಲಿ ಆಗಿದೆ. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುನಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯ ಜಾರಿಗೆ ತರುವಲ್ಲಿಯೂ ಸರ್ಕಾರ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ,‌ ಇದು ಗಂಭೀರವಾದ ವಿಚಾರ. ಹಾಗಾಗಿ ಸರ್ಕಾರ ತನಿಖೆ ನಡೆಸಬೇಕು ಎಂಬ ಒತ್ತಾಯ ಇದೆ.‌ ಹೀಗೆ ಧರಣಿ ನಡೆಸಿದರೆ ಇತರ ಕಾರ್ಯಕಲಾಪ ನಡೆಯಲು ಸಾಧ್ಯವಿಲ್ಲ. ಹೀಗಾಗಿ, ಕಾನೂನು‌ ಸಚಿವರು ಸಭಾನಾಯಕರುಗಳನ್ನು ಕರೆದು ಮಾತನಾಡಿ ಎಂದು ಸಲಹೆ ನೀಡಿದರು.

 

Share.
Exit mobile version