ಬೆಂಗಳೂರು: ಈ ಹಿಂದೆ ಹಲವು ಬಾರಿ ಬಿಎಂಎಸ್ ಆಸ್ತಿಯ ದುರ್ಬಳಕೆ ರಿವೀಲ್ ಮಾಡಿದ್ದರು. ಇಂದು ಮತ್ತೆ ಬಿಎಂಎಸ್ ಟ್ರಸ್ಟಿಗಳ ಜೊತೆಗೆ ಸಚಿವ ಅಶ್ವತ್ಥನಾರಾಯಣ ಅವರು ಊಟ ಮಾಡುತ್ತಿರುವಂತ ಪೋಟೋವನ್ನು ರಿವೀಲ್ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು, ಇಂದು ಮತ್ತೆ ಬಿಎಂಎಸ್ ಟ್ರಸ್ಟ್ ವಿಚಾರವನ್ನು ಪ್ರಸ್ತಾಪಿಸಿದರು. ಬಿಎಂಎಸ್ ಟ್ರಸ್ಟ್ ನವರ ಜೊತೆಗೆ ಸಚಿವ ಡಾ.ಸಿಎನ್ ಅಶ್ವತ್ಥ್ ನಾರಾಯಣ ಅವರು ಭೋಜನ ಕೂಟದಲ್ಲಿ ಭಾಗವಹಿಸಿರೋ ಪೋಟೋ ತೋರಿಸಿದಂತ ಅವರು, ನೋಡಿ ಈ ಮಹಾನುಭಾವ ಎಲ್ಲಿ ಕುಳಿತುಕೊಂಡು ಸರ್ಕಾರಿ ಜಾಗವನ್ನು ಬರೆದುಕೊಟ್ಟಿದ್ದಾನೆ ಎಂದು ಗುಡುಗಿದರು.
ಇನ್ನೂ ಸಚಿವ ಅಶ್ವತ್ಥನಾರಾಯಣ ಹೀಗೆ ಮಾಡಿರೋ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಕೊಡುತ್ತಾರಾ ಎಂದು ಕೇಳಿದರು. ಸಾರ್ವಜನಿಕರ ಟ್ರಸ್ಟ್, ಸರ್ಕಾರದ ಆಸ್ತಿಯನ್ನು ಯಾವನಿಗೆ ಲೂಟಿ ಮಾಡೋದಕ್ಕೆ ಕೊಟ್ಟಿದ್ದೀರಿ ಎಂಬುದಾಗಿ ಕಿಡಿಕಾರಿದರು.
ನಮ್ಮ ಸರ್ಕಾರ ಬಂದರೇ ಇದಕ್ಕೆಲ್ಲ ಬ್ರೇಕ್ ಹಾಕಲಿದೆ. ನಾವು ಯಾವುದಕ್ಕೂ ಹೆದರುವುದಿಲ್ಲ. ನಮ್ಮ ಸರ್ಕಾರ ಬಂದಾಗ ಎಲ್ಲವನ್ನು ಬಿಚ್ಚಿಡುತ್ತೇವೆ ಎಂಬುದಾಗಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದರು.
ಎಚ್ಚರ..! ಎಷ್ಟು ನೀರು ಕುಡಿದರೂ, ಬಾಯಾರಿಕೆ ನೀಗಿಸುವುದಿಲ್ಲವೇ? ಇದು ಗಂಭೀರ ರೋಗದ ಲಕ್ಷಣ!?
BREAKING NEWS : ಸಂಸತ್ತಿನಲ್ಲಿ ‘ರಾಹುಲ್ ಗಾಂಧಿ’ ಭಾಷಣ ; ಇಲ್ಲಿದೆ ಕೈ ನಾಯಕನ ಮಾತಿನ ಹೈಲೈಟ್ಸ್.!
‘ವಾಟ್ಸಾಪ್’ ಹೊಸ ವೈಶಿಷ್ಟ್ಯ ; ಇನ್ಮುಂದೆ ಈ ಬಳಕೆದಾರರು ಏಕಕಾಲಕ್ಕೆ 100 ಫೋಟೋ, ವಿಡಿಯೋ ಹಂಚಿಕೊಳ್ಳಬಹುದು!