ಕರ್ನಾಟಕ ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ‘ಸಂಸದ ಡಾ.ರಾಧಾಮೋಹನ್ ದಾಸ್’ ನೇಮಕ

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ಸಂಸದ ಡಾ.ರಾಧಾಮೋಹನ್‍ದಾಸ್ ಅಗರ್ವಾಲ್ ಮತ್ತು ಸಹ ಉಸ್ತುವಾರಿಯಾಗಿ ಸುಧಾಕರ್ ರೆಡ್ಡಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ನೇಮಿಸಿದ್ದನ್ನು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಸ್ವಾಗತಿಸಿದ್ದು, ಇಬ್ಬರನ್ನೂ ಅಭಿನಂದಿಸಿದ್ದಾರೆ. ಡಾ.ರಾಧಾಮೋಹನ್‍ದಾಸ್ ಅವರು ಕರ್ನಾಟಕದ ಲೋಕಸಭಾ ಚುನಾವಣಾ ಉಸ್ತುವಾರಿಯಾಗಿ ಕೆಲಸ ಮಾಡಿದ್ದು, ಕಾರ್ಯಕರ್ತರಿಗೆ ಮತ್ತು ಮುಖಂಡರಿಗೆ ಸಮರ್ಥವಾಗಿ ಮಾರ್ಗದರ್ಶನ ನೀಡಿದ್ದಾರೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ, ಅವರ ಸಲಹೆ- ಮಾರ್ಗದರ್ಶನದೊಂದಿಗೆ ಪಕ್ಷವು 17 ಲೋಕಸಭಾ ಸ್ಥಾನಗಳಲ್ಲಿ ಗೆಲುವು … Continue reading ಕರ್ನಾಟಕ ಬಿಜೆಪಿ ರಾಜ್ಯ ಉಸ್ತುವಾರಿಯಾಗಿ ‘ಸಂಸದ ಡಾ.ರಾಧಾಮೋಹನ್ ದಾಸ್’ ನೇಮಕ