ಸಹರಾನ್ಪುರ : ಮುಂಬರುವ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಇವಿಎಂಗಳನ್ನು ತಿರುಚದೆ ದೇಶವು ನ್ಯಾಯಸಮ್ಮತ ಚುನಾವಣೆ ನಡೆಸಿದರೆ, ಭಾರತೀಯ ಜನತಾ ಪಕ್ಷವು 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಹೇಳಿದರು.

ಮಾಧ್ಯಮಗಳ ಜೊತೆ ಮಾತನಾಡಿದ ಕಾಂಗ್ರೆಸ್ ನಾಯಕಿ, 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂಬ ಬಿಜೆಪಿಯ ಹೇಳಿಕೆಯ ಆಧಾರವನ್ನು ಪ್ರಶ್ನಿಸಿದರು. “ಯಾವ ಆಧಾರದ ಮೇಲೆ ಅವರು 400 ಪಡೆಯುತ್ತಾರೆ ಎಂದು ಹೇಳುತ್ತಿದ್ದಾರೆ, ಅವರು 400 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಹೇಗೆ ಹೇಳಲು ಸಾಧ್ಯ?… ಇಂದು ಈ ದೇಶದಲ್ಲಿ, ಚುನಾವಣೆಗಳನ್ನು ಈ ರೀತಿಯಲ್ಲಿ ನಡೆಸಿದರೆ… ಇವಿಎಂಗಳನ್ನು ಟ್ಯಾಂಪರ್‌ ಮಾಡದೇ ಇದ್ದರೇ ಅವರು 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ, ವಾಸ್ತವವಾಗಿ ಅವರು 180 ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತಾರೆ ಎಂದು ನಾನು ಸಂಪೂರ್ಣ ವಿಶ್ವಾಸದಿಂದ ಹೇಳಬಲ್ಲೆ ಅಂತ ಹೇಳಿದರು.

Share.
Exit mobile version