ಸುಭಾಷಿತ :

Saturday, February 22 , 2020 9:23 AM

ಮೈತ್ರಿ ನಾಯಕರ ಪುಟಗೋಸಿಯನ್ನು ಜನರು ಹರಿದಿದ್ದಾರೆ : ಆರ್ ಅಶೋಕ್ ವ್ಯಂಗ್ಯ


Saturday, May 25th, 2019 3:54 pm


ಬೆಂಗಳೂರು : ಒಂದು ವರ್ಷದ ಹಿಂದೆ ಮೈತ್ರಿ ಹಡಗು ರಮೇಶ್ ಜಾರಕಿಹೊಳಿಯಂದ ತೂತು ಬಿದ್ದಿತ್ತು. ಈಗ ಇದೇ ಹಡಗು ಮುಳುಗುವ ಹಡಗಾಗಿದೆ. ಇನ್ನೇನು ಸದ್ಯದಲ್ಲೇ ಮೈತ್ರಿ ಹಡಗು ಸಂಪೂರ್ಣ ಮುಳುಗಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿಯ ಆರ್ ಅಶೋಕ್ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ನೆರಳನ್ನು ಹುಡುಗಿಕೊಂಡು ಯಾರೂ ಹೋಗುವುದಿಲ್ಲ. ಯಾಕೆಂದರೇ ಕಾಂಗ್ರೆಸ್ ಒಣಗಿದ ಮರದಂತೆ ಆಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ನೈತಿಕ ಗೌರವ ಇದ್ದರೇ ಕೂಡಲೇ ರಾಜೀನಾಮೆ ಕೊಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಮುಂದುವರೆದು ಮಾತನಾಡಿದ ಅವರು, ಈ ಹಿಂದೆ ರಾಮಕೃಷ್ಣ ಹೆಗಡೆ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಾಗ ರಾಜೀನಾಮೆ ನೀಡಿದ್ದರು. ಸದ್ಯ ಸಿದ್ದರಾಮಯ್ಯ ಹಾಗೂ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಇದೇ ಪರಿಸ್ಥಿತಿ ಬಂದು ಒದಗಿದೆ. ನೈತಿಕತೆ ಇದ್ದರೇ ರಾಜೀನಾಮೆ ಕೊಡಲಿ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ನಾಯಕರ ಪುಟಗೋಸಿಯನ್ನು ರಾಜ್ಯದ ಜನರು ಹರಿದು ಹಾಕಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions